ಮೂಡುಬಿದಿರೆ: ಅಜೆಕಾರು ಮೂಲದ ಆದಿ ಗ್ರಾಮೋತ್ಸವದ ರಜತ ಸಂಭ್ರಮ (Silver celebration) ಆಚರಣೆಯಂಗವಾಗಿ 25 ಮಂದಿ ತುಳುವ ಸಾಧಕರಿಗೆ (25 Thuluva Achivers) ನಮ್ಮ ನಮನ ಎಂಬ ಕಾರ್ಯಕ್ರಮ ಸರಣಿಯನ್ನು ಹಮ್ಮಿಕೊಳ್ಳಲಾಯಿತು.
ಮೂಡುಬಿದಿರೆ ಬೆಟ್ಕೇರಿ ರಸ್ತೆ (Moodbidire Betkeri Road) ಪಕ್ಕ ಇರುವ, ಮಹಾಕವಿ ರತ್ನಾಕರ ವರ್ಣಿಯ ನಗರೇಶ್ವರ ಮನೆಯಲ್ಲಿರುವ (Mahakavi Ratnakara Varni’s Nagareshwar home), ಕವಿಯು ಕಾವ್ಯ ರಚಿಸಿದ ತೂಗುಮಂಚದಲ್ಲಿ ಕವಿಯ ಕೃತಿಗಳ ಸಮ್ಮುಖದಲ್ಲಿ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ (Former Minister K. Abhay Chandra Jain) ಉದ್ಘಾಟಿಸಿದರು.
ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಎಂ.(D.K. District BJP President Sudarshan M) ಮಾತನಾಡಿ, ಚಾರಿತ್ರಿಕ ಮಹತ್ವದ ಕವಿಯ ಮನೆಯನ್ನು ಸಂರಕ್ಷಿಸುವ ಹೊಣೆ ನಮ್ಮೆಲ್ಲರದಾಗಿದೆ. ಈ ಬಗ್ಗೆ ಸರ್ಕಾರದ ನೆಲೆಯಲ್ಲಿ ಯೋಜನೆ ಹಾಕಿಕೊಳ್ಳಲು ಖಂಡಿತ ಪರಿಶ್ರಮಿಸುವೆ ಎಂದರು.
ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್, ಎಂಸಿಎಸ್ ಸೊಸೈಟಿ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಶ್ರೀಪತಿ ಭಟ್, ಪಟ್ಲ ಫೌಂಡೇಶನ್ ಮೂಡುಬಿದಿರೆ ಪ್ರಧಾನ ಸಂಚಾಲಕ ಪ್ರೇಮನಾಥ ಮಾರ್ಲ ಮುಖ್ಯಅತಿಥಿಗಳಾಗಿದ್ದರು.
ನಗರೇಶ್ವರ ಮನೆಯ ಅಳಿಯ, ವರ್ಧಮಾನ ಪ್ರಶಸ್ತಿ ಪೀಠದ ಸದಸ್ಯ ಶ್ರೀಪಾಲ್ ಎಸ್. ರತ್ನಾಕರ ಶತಕದ ಸ್ತುತಿಪದ್ಯವನ್ನು ಹಾಡಿದರು. ಭರತೇಶ ವೈಭವದ ಆರಂಭದಲ್ಲಿರುವ ಸ್ತುತಿ `ಪರಮ ಪರಂಜ್ಯೋತಿ ಕೋಟಿ…’ (Param Paranjyoti Koti) ಪದ್ಯ ಹಾಡಿ ಸ್ವಾಗತಿಸಿದರು.
ಇದನ್ನ ಓದಿ: ಯುವ ಕೃಷಿಕ ನಾಗರಾಜ ಶೆಟ್ಟಿ ಅಂಬೂರಿಗೆ ಶ್ರೇಷ್ಠ ರೈತ ಪ್ರಶಸ್ತಿ ಪ್ರದಾನ
ಆದಿ ಗ್ರಾಮೋತ್ಸವದ ಸಂಯೋಜಕ ಡಾ. ಶೇಖರ ಅಜೆಕಾರು ಪ್ರಸ್ತಾವನೆಗೈದರು. ನಗರೇಶ್ವರ ಮನೆಯೊಡತಿ ಕೇಸರಿ ರವಿರಾಜ್ ಶೆಟ್ಟಿ, ಕವಯಿತ್ರಿ ಮಣಿರತ್ನ , ವಾಯ್ಸ್ ಆರಾಧನಾ ಪ್ರವರ್ತಕಿ ಪದ್ಮಶ್ರೀ ಭಟ್ ಉಪಸ್ಥಿತರಿದ್ದರು. ಧನಂಜಯ ಮೂಡುಬಿದಿರೆ ನಿರೂಪಿಸಿ, ಕವಯಿತ್ರಿ ನಾಗಶ್ರೀ ಭಂಡಾರಿ ನಿರೂಪಿಸಿದರು.