ಮೂಡುಬಿದಿರೆ: ತಾಲೂಕು ಮರಾಠಿ ಸಮಾಜ ಸೇವಾ ಸಂಘ(Thaluk marati samaja seva Sangha), ಮರಾಠಿ ಚಾರಿಟೇಬಲ್ ಟ್ರಸ್ಟ್(Marati charitable trust), ಮಹಿಳಾ ವೇದಿಕೆ(Women’s club) ಹಾಗೂ ಯುವ ವೇದಿಕೆಯ ವತಿಯಿಂದ ವಾರ್ಷಿಕೋತ್ಸವದ ಪ್ರಯುಕ್ತ ಪ್ರತಿಭಾ ಪುರಸ್ಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಭಾನುವಾರ ಸಮಾಜಮಂದಿರದಲ್ಲಿ ನಡೆಯಿತು.
ಉದ್ಯಮಿ ಶ್ರೀಪತಿ ಭಟ್(Shreepathi Bhat) ಕಾರ್ಯಕ್ರಮ ಉದ್ಘಾಟಿಸಿದರು. ನಮ್ಮ ಸಂಸ್ಕೃತಿ, ಸಂಸ್ಕಾರ ಸಾಧನೆಗಳಿಗೆ ಪ್ರೇರಣೆ ಎಂದರು.
ನಿವೃತ್ತ ಅರಣ್ಯಾಧಿಕಾರಿ ಸುಂದರ್ ನಾಯ್ಕ್, ಎಸ್.ಬಿ.ಐ ನಿವೃತ್ತ ಪ್ರಬಂಧಕ ರಾಮಚಂದ್ರ ನಾಯ್ಕ್, ಅಬಕಾರಿ ಇಲಾಖೆಯ ಆಯುಕ್ತ ಬಾಲಕೃಷ್ಣ ನಾಯ್ಕ್, ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ನ ನಿವೃತ್ತ ಡಿ.ಎಂ ವಿ.ಪಿ. ನಾಯ್ಕ್ ,ಮರಾಟಿ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಪ್ರಕಾಶ್ ನಾಯ್ಕ್, ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ರಾಮಚಂದ್ರ ಕೆಂಬಾರೆ, ಕಾರ್ಯದರ್ಶಿ ಶಂಕರ್ ನಾಯ್ಕ್, ಕೋಶಾಧಿಕಾರಿ ವಿಠಲ್ ನಾಯ್ಕ್, ಮಹಿಳಾ ವೇದಿಕೆಯ ಅಧ್ಯಕ್ಷೆ ಜಯಶ್ರಿ,ಯುವ ವೇದಿಕೆಯ ಸುಶ್ಮಿತಾ ನಾಯ್ಕ್, ಉಪಸ್ಥಿತರಿದ್ದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.