ಮೂಡುಬಿದಿರೆ: ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಶ್ರೀ ಕ್ಷೇತ್ರ ಇರುವೈಲು (Shree Kshetra Iruvail) ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥ ಹಾಗೂ ಭಕ್ತಾಧಿಗಳ ಅಭೀಷ್ಟೆಯ ಫಲ ಸಿದ್ಧಿಗಾಗಿ ಶ್ರೀ ಕ್ಷೇತ್ರ ಇರುವೈಲಿನಿಂದ ಕಟೀಲಿನ ಭ್ರಮಾರಾಂಭಿಕೆ ಕ್ಷೇತ್ರಕ್ಕೆ (Kateel Brhamarambika Temple) 10ನೇ ವರ್ಷದ ಭಕ್ತಿಯ ನಡಿಗೆ ಅಮ್ಮನೆಡೆಗೆ ಭಾನುವಾರ ನಡೆಯಿತು.
ಇದನ್ನ ಓದಿ: ಮಿಜಾರು ಕಾಂಬೆಟ್ಟು ಸೋಮನಾಥೇಶ್ವರ ದೇವಸ್ಥಾನ ಬ್ರಹ್ಮಕಲಶಾಭಿಷೇಕ; ಧಾರ್ಮಿಕ ಸಭೆ
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಐ.ಕುಮಾರ್ ಶೆಟ್ಟಿ, ಹಿರಿಯ ಭಜಕ ಚೆನ್ನಕೇಶವ ಶೆಟ್ಟಿ, ಪದ್ಮನಾಭ ಪೂಜಾರಿ, ಮೋಹನ್ ಆಚಾರ್ಯ, ಮೋಹನ್ ,ನಿಶಾ ಕಾಳೂರು ಸಹಿತ 150 ಮಂದಿ ಭಜಕರು ಭಜನೆ ಸಂಕೀರ್ತನೆಯ ಮೂಲಕ ಪಾದಯಾತ್ರೆ ಕೈಗೊಂಡರು.