ಮೂಡುಬಿದಿರೆ: ಕೋಟೆಬಾಗಿಲು ವೀರಮಾರುತಿ ದೇವಸ್ಥಾನದಲ್ಲಿ (Kote Bagilu Veeramaruti Temple) ಮೇ 27ರಿಂದ 29ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಭಕ್ತರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಬಳಿಕ ಮುಷ್ಠಿ ಕಾಣಿಕೆ ಸಮರ್ಪಿಸಿದರು.
ಇದನ್ನ ಓದಿ: ಮೂಡುಬಿದಿರೆ ಕಾಳಿಕಾಂಬಾ ದೇವಳದಲ್ಲಿ ಲಕ್ಷ ಕುಂಕುಮಾರ್ಚನೆ
ಧಾರ್ಮಿಕ ಪರಿಷತ್ತಿನ ಸದಸ್ಯ ದೇವೇಂದ್ರ ಹೆಗ್ಡೆ (Devendra Hegde is a member of the religious council), ಬ್ರಹ್ಮಕಲಶೋತ್ಸವ ಸಮಿತಿ ಗೌರವ ಅಧ್ಯಕ್ಷ ಡಾ.ಸುರೇಂದ್ರ ಕುಮಾರ್ ಹೆಗ್ಡೆ (Honorary President Dr. Surendra Kumar Hegde), ಸಮಿತಿ ಅಧ್ಯಕ್ಷ ಉದಯ ಕುಮಾರ್ ಹೆಗ್ಡೆ, ಕರ‍್ಯದರ್ಶಿ ಕೇಶವ ಹೆಗ್ಡೆ, ದೇವಸ್ಥಾನದ ಆಡಳಿತ ಮೊಕ್ತೇಸರ ಶ್ಯಾಮ ಹೆಗ್ಡೆ, ಕರ‍್ಯದರ್ಶಿ ಶೇಖರ ಹೆಗ್ಡೆ, ದ.ಕ ಜಿಲ್ಲಾ ಹೆಗ್ಗಡೆ ಸಮಾಜ ಸಂಘದ ಅಧ್ಯಕ್ಷ ನವೀನ್ ಹೆಗ್ಡೆ, ಕರ‍್ಯದರ್ಶಿ ಪ್ರಣಿಲ್ ಹೆಗ್ಡೆ, ಮಹಿಳಾ ಘಟಕದ ಅಧ್ಯಕ್ಷೆ ವಿನೋದ ಜಿ. ಹೆಗ್ಡೆ, ಕರ‍್ಯದರ್ಶಿ ಅಶ್ವಿನಿ ಎನ್. ಹೆಗ್ಡೆ, ಪುರಸಭೆ ನಾಮನಿರ್ದೇಶಿತ ಸದಸ್ಯ ರಾಘವ ಹೆಗ್ಡೆ, ಹಿರಿಯರಾದ ಸೂರ್ಯಣ್ಣ ಹೆಗ್ಡೆ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.