ಮೂಡುಬಿದಿರೆ : ರೂ. 5.39 ಕೋ.ವೆಚ್ಚದ ಅನುದಾನದಲ್ಲಿ ನಾಗರಕಟ್ಟೆ (Nagarkatte) ಬಳಿ ನಿರ್ಮಾಣವಾಗಲಿರುವ ತಾ.ಪಂಚಾಯತ್ (Thaluk Panchayat)ನೂತನ ಕಟ್ಟಡಕ್ಕೆ ಶಾಸಕ ಉಮಾನಾಥ ಕೋಟ್ಯಾನ್ (MLA Umanatha Kotyan) ಸೋಮವಾರ ಶಿಲಾನ್ಯಾಸ ನೆರವೇರಿಸಿದರು.
ಇದನ್ನ ಓದಿ: ಮಿಜಾರು ಕಾಂಬೆಟ್ಟು ಸೋಮನಾಥೇಶ್ವರ ದೇವಸ್ಥಾನ ಬ್ರಹ್ಮಕಲಶಾಭಿಷೇಕ; ಧಾರ್ಮಿಕ ಸಭೆ
ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ದಯಾವತಿ ಎಂ., ದ.ಕ.ಹಾಲು ಉತ್ಪಾದಕರ ಒಕ್ಕೂಟ (Dakshina Kannada Milk Producers Union) ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ,ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಉಪಾಧ್ಯಕ್ಷೆ ಸುಜಾತ ಶಶಿಕಿರಣ್, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಮೂಡ ಅಧ್ಯಕ್ಷರಾದ ಮೇಘನಾಥ ಶೆಟ್ಟಿ, ಪುತ್ತಿಗೆ ಗ್ರಾ.ಪಂ.ಅಧ್ಯಕ್ಷ ಪ್ರವೀಣ್ ಶೆಟ್ಟಿ, ಬೆಳುವಾಯಿ ಗ್ರಾ.ಪಂ ಅಧ್ಯಕ್ಷೆ ಸುಶೀಲಾ, ವಾಲ್ಪಾಡಿ ಗ್ರಾ.ಪಂ . ಅಧ್ಯಕ್ಷ ಪ್ರದೀಪ್ ಕುಮಾರ್, ಇರುವೈಲ್ ಗ್ರಾ.ಪಂ ಅಧ್ಯಕ್ಷ ವಲೇರಿಯನ್ ಕುಟಿನ್ಹಾ (Valerian Cutinha, President of Iruvail G.P) , ಪಡುಮಾರ್ನಾಡು ಗ್ರಾ.ಪಂ.ಅಧ್ಯಕ್ಷೆ ಸಿ.ಎಸ್.ಕಲ್ಯಾಣಿ, ಉದ್ಯಮಿ ರಂಜಿತ್ ಪೂಜಾರಿ (Businessman Ranjit Pujari), ಅಜೇಯ್ ರೈ, ಸಹಾಯಕ ನಿರ್ದೇಶಕರು(ಗ್ರಾ.ಉ) ರಮೇಶ್ ರಾಥೋಡ್, ಪುರಸಭೆಯ ಮುಖ್ಯಾಧಿಕಾರಿ ಇಂದು ಎ., ಕಾರ್ಯಪಾಲಕ ಅಭಿಯಂತರು ವೇಣುಗೋಪಾಲ, ದ.ಕ.ಜಿ.ಪ ಇಂಜಿನಿಯರಿಂಗ್ ಉಪವಿಭಾಗ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹನುಮಂತ ರಾಯಪ್ಪ, ಸಹಾಯಕರ ಇಂಜಿನಿಯರ್ ಜಗದೀಪ್ ಶೇಟ್, ಪುರಸಭೆಯ ಸದಸ್ಯರು, ವಿವಿಧ ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ಸದಸ್ಯರು, ಉಪಸ್ಥಿತರಿದ್ದರು.