ಮೂಡುಬಿದಿರೆ: ತೆಂಕಮಿಜಾರು ಗ್ರಾಮ ಪಂಚಾಯತ್ (Thenkamijaru Gram Panchayat) ವ್ಯಾಪ್ತಿಯಲ್ಲಿ 2.2ಕೋ.ವೆಚ್ಚದಲ್ಲಿ ಅನುಷ್ಠಾನಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಾದ(Development work) ಮೈಂದೇರಿ ರಸ್ತೆ(Minderi Road), ಗಂಟೆಗೆ ಕೇಪುಳು ರಸ್ತೆ,ಗುಡ್ಡಬೆಟ್ಟು ರಸ್ತೆ ಗುದ್ದಲಿ ಪೂಜೆ ಹಾಗೂ ಬಂಗಬೆಟ್ಟು ಗುತ್ತು ಸಂಪರ್ಕ ಕಾಲು ಸಂಕವನ್ನು ಶಾಸಕ ಉಮಾನಾಥ ಕೋಟ್ಯಾನ್( MLA Umanatha Kotyan) ಲೋಕಾರ್ಪಣೆಗೊಳಿಸಿದರು(public offering).
ತೆಂಕಮಿಜಾರು ಗ್ರಾ.ಪಂ. ಉಪಾಧ್ಯಕ್ಷೆ ಶಮಿತಾ ಶೆಟ್ಟಿ, ಸದಸ್ಯರಾದ ನೇಮಿರಾಜ್ ಶೆಟ್ಟಿ, ಕರುಣಾಕರ ಶೆಟ್ಟಿ, ವಿದ್ಯಾನಂದ ಶೆಟ್ಟಿ, ಬಿ.ಎಲ್.ದಿನೇಶ್ ಕುಮಾರ್ , ಮಹೇಶ್ ಗೌಡ, ಲಿಂಗಪ್ಪ ಗೌಡ,ಗೀತಾ, ಲಕ್ಷ್ಮೀ, ಮಂಡಲದ ಉಪಾಧ್ಯಕ್ಷ ಅಜಯ್ ರೈ, ಮುಖಂಡರಾದ ಲಕ್ಷ್ಮೀಶ ಶೆಟ್ಟಿ, ಬಂಗಬೆಟ್ಟು ಗುತ್ತಿನ ಗಣೇಶ್ ಕಿರಣ್ ಶೆಟ್ಟಿ, ಗ್ರಾಮಸ್ಥರಾದ ಸುದರ್ಶನ್ ಪೂಂಜಾ, ಊರಿನ ಹಿರಿಯರು ಈ ಸಂದರ್ಭದಲ್ಲಿದ್ದರು.