ಮೂಡುಬಿದಿರೆ: ಇರುವೈಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ (Iruvailu Sri Durgaparameshwari Temple)ವರ್ಷಾವಧಿ ಮಹೋತ್ಸವ ಹಾಗೂ ರಥೋತ್ಸವ ಸಂದರ್ಭದಲ್ಲಿ ನಮ್ಮ ಜವನೆರ್ ಇರುವೈಲು ಇದರ 8ನೇ ವಾರ್ಷಿಕೋತ್ಸವವು (8th Anniversary) ನಡೆಯಿತು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ (KPCC General Secretary Mithun Rai) ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನಮ್ಮ ಜವನೆರ್ ಕಾರ್ಯವೈಖರಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಐ.ಕುಮಾರ್ ಶೆಟ್ಟಿ (Management Committee Chairman I. Kumar Shetty) ಅಧ್ಯಕ್ಷತೆ ವಹಿಸಿದ್ದರು.
ವ್ಯವಸ್ಥಾಪನಾ ಸಮಿತಿಯ ಹಾಲಿ ಅಧ್ಯಕ್ಷ ಪೂವಪ್ಪ ಸಾಲ್ಯಾನ್ (The current president is Poovappa Salyan), ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಅಧ್ಯಕ್ಷ ಬಾಲಚಂದ್ರ ಶೆಟ್ಟಿ, ನಮ್ಮ ಜವನೆರ್ ಸಂಘದ ಅಧ್ಯಕ್ಷ ಸುನೀಲ್ ಬಾರ್ದಿಲ ಈ ಸಂದರ್ಭದಲ್ಲಿದ್ದರು.
ನಮ್ಮ ಜವನೆರ್ ತಂಡದ ಪವನ್ ಶೆಟ್ಟಿ ಸ್ವಾಗತಿಸಿದರು. ಪ್ರೇಮಾನಂದ ಇರುವೈಲು ಕಾರ್ಯಕ್ರಮ ನಿರೂಪಿಸಿದರು. ಪ್ರಶಾಂತ್ ಆಚಾರ್ಯ ಧನ್ಯವಾದಗೈದರು.
ಇದನ್ನ ಓದಿ: ಮಾರೂರು-ಹೊಸಂಗಡಿ ಶ್ರೀಗೋಪಾಕೃಷ್ಣ ದೇವಳಕ್ಕೆ ಶಿಲಾನ್ಯಾಸ
ಬಳಿಕ ನಮ್ಮ ಜವನೆರ್ ಇರುವೈಲು ಪ್ರಾಯೋಜಕತ್ವದಲ್ಲಿ ಸ್ಥಳೀಯ ನೃತ್ಯ ಪ್ರತಿಭೆಗಳಿಂದ ಸಾಂಸ್ಕೃತಿಕ ವೈಭವ (Cultural glory) ಹಾಗೂ ಮಂಗಳೂರಿನ ಶ್ರೀ ಲಲಿತೆ ಕಲಾವಿದರಿಂದ ಗರುಡ ಪಂಚಮಿ ತುಳು ಪೌರಾಣಿಕ ನಾಟಕ (Tulu mythological drama) ನಡೆಯಿತು.