ಮೂಡುಬಿದಿರೆ: ಕಳೆದ 35 ವರ್ಷಗಳಿಂದ ಮೂಲ್ಕಿ(Mulki), ಮೂಡುಬಿದಿರೆ(Moodbidire)ತಾಲೂಕುಗಳಲ್ಲಿ ಕಾರ್ಯಚರಿಸುತ್ತಿರುವ ಬಳಕೆದಾರ ಜಾಗೃತಿ ವೇದಿಕೆ (User Awareness Forum)ಕಿನ್ನಿಗೋಳಿ ಇದರ ಪದಗ್ರಹಣ ಸಮಾರಂಭ ಜ.20ರಂದು ಮೂಡುಬಿದಿರೆ ಸಮಾಜಮಂದಿರದಲ್ಲಿ(Samaja Mandir)ನಡೆಯಲಿದೆ ಎಂದು ವೇದಿಕೆಯ ನೂತನ ಅಧ್ಯಕ್ಷ ಅರುಣ್ ಪ್ರಕಾಶ್ ಶೆಟ್ಟಿ(Arun Prakash Shetty) ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾಯಂಕಾಲ 5 ಗಂಟೆಗೆ ಶಾಸಕ ಉಮಾನಾಥ ಎ.ಕೋಟ್ಯಾನ್ (Umanath Kotian)ಕಾರ್ಯಕ್ರಮ ಉದ್ಘಾಟಿಸಲಿರುವರು. ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಜಿಲ್ಲಾಧಿಕಾರಿ ರವಿ ಕಮಾರ್ ಎಂ.ಆರ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್, ದ.ಕ ಗ್ರಾಹಕರ ದೂರು ಪರಿಹಾರ ವೇದಿಕೆಯ ನ್ಯಾಯಾಧೀಶ ಪ್ರಕಾಶ್ ಕೆ., ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ ನಿರ್ದೇಶಕ ಎನ್ ಮಾಣಿಕ್ಯ ಮುಖ್ಯ ಅತಿಥಿಗಳಾಗಿರುವರು, ಬಳಕೆದಾರರ ಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಪದ್ಮನಾಭ ಶೆಟ್ಟಿ ಅವರನ್ನು ಸನ್ಮಾನಿಸಲಾಗುವುದು. ವೇದಿಕೆಯ ಕಚೇರಿಯು ಕಿನ್ನಿಗೋಳಿಯಲ್ಲಿದ್ದು, ಶೀಘ್ರದಲ್ಲಿ ಮೂಡುಬಿದಿರೆಯಲ್ಲಿ ಕಚೇರಿ ತೆರೆಯಲಾಗುವುದು ಎಂದು ಅರುಣ್ ಪ್ರಕಾಶ್ ಶೆಟ್ಟಿ ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಡಾ.ಶಿವರಾಜ್ ಅರಸ್, ಜೊತೆ ಕಾರ್ಯದರ್ಶಿ ದಯಾನಂದ ನಾಯ್ಕ್, ಸಂಯೋಜಕ ಡಾ.ರವೀಶ್ ಕುಮಾರ್ ಎಂ., ವೇದಿಕೆಯ ಪ್ರಮುಖರಾದ ಪದ್ಮನಾಭ ಶೆಟ್ಟಿ, ಜೈಸನ್ ತಾಕೋಡೆ, ಪ್ರೇಮಾಶ್ರೀ ಕಲ್ಲಬೆಟ್ಟು ಸುದ್ದಿಗೋಷ್ಠಿಯಲ್ಲಿದ್ದರು.