ಮೂಡುಬಿದಿರೆ: ಸುಮಾರು 100 ವರ್ಷಗಳಿಗಿಂತಲೂ ಹೆಚ್ಚು ಇತಿಹಾಸವಿರುವ ಮೂಡುಬಿದಿರೆ ಪ್ರವಾಸಿ ಬಂಗಲೆಯನ್ನು (Tourist bungalow) ಕೋಟ್ಯಂತರ ರೂಪಾಯಿ ಕೊಳ್ಳೆ ಹೊಡೆಯುವ ಉದ್ದೇಶದಿಂದ ಶೇ.40 ಕಮಿಷನ್ ಗೋಸ್ಕರ ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡಲು ಹುನ್ನಾರ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಈ ಕಟ್ಟಡವನ್ನು ಕೆಡವಲು ನಾವು ಬಿಡುವುದಿಲ್ಲ, ಸಾಕಷ್ಟು ವಿರೋಧವಿದ್ದರೂ ಶಾಸಕರು ಸುಸಜ್ಜಿತವಾಗಿರುವ ಕಟ್ಟಡವನ್ನು ಕೆಡವಲು ಮುಂದಾದರೆ ಶಾಸಕರಿಗೆ ಘೇರಾವ್ ಹಾಕಲಾಗುವುದೆಂದು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಎಚ್ಚರಿಸಿದ್ದಾರೆ.
ಇದನ್ನ ಓದಿ: ಫೆ.19ರಂದು ಎಸ್‌ಡಿಪಿಐ ಕಚೇರಿ ಉದ್ಘಾಟನೆ; ಸಾರ್ವಜನಿಕ ಸಭೆ
ಲವ್ಲಿ ಬಂಗ್ಲೆ (Lovely bungalow) ಹೆಸರಿನ ಮೂಡುಬಿದಿರೆ ಪ್ರವಾಸಿ ಬಂಗಲೆಗೆ ಸುಮಾರು 116 ವರ್ಷಗಳ ಇತಿಹಾಸವಿದೆ, 1907ರಲ್ಲಿ ಅಂದಿನ ಮದರಾಸು ಗವರ್ನರ್ ಆರ್ಥರ್ ಲವ್ಲಿ ಅವರು ಉದ್ಘಾಟಿಸಿದ್ದರು. ಮೂಡುಬಿದಿರೆಯಲ್ಲಿ ಈಗ ಉಳಿದಿರುವ ಹಳೆಯ ಹಾಗೂ ಸುಸಜ್ಜಿತವಾದ ಕಟ್ಟಡ ಇದಾಗಿದೆ.ಕಳೆದ ವರ್ಷ ಈ ಕಟ್ಟಡವನ್ನು ಕೆಲವು ಲಕ್ಷ ವೆಚ್ಚದಲ್ಲಿ ದುರಸ್ತಿಗೊಳಿಸಲಾಗಿತ್ತು. ಇದೀಗ ಈ ಕಟ್ಟಡವನ್ನು ಕೆಡವಿ ಐದು ಕೋಟಿ ರೂ.ವೆಚ್ಚದಲ್ಲಿ ಹೊಸ ಕಟ್ಟಡವನ್ನು ನಿರ್ಮಿಸುವ ಹುನ್ನಾರ ನಡೆಯುತ್ತಿದೆ. ಮೂಡುಬಿದಿರೆ ಜನತೆಯ ವಿರೋಧವಿದ್ದರೂ ಶಾಸಕರು ಅಷ್ಟೊಂದು ಆಸಕ್ತಿಯಿಂದ ಮುಂದುವರಿಯುತ್ತಿರುವುದೇಕೆ? ಎಂದು ಪ್ರಶ್ನಿಸಿರುವ ಅಭಯಚಂದ್ರ, ಇದು ಶೇ.40 ಕಮಿಷನ್‌ಗಾಗಿ (40 percent Commission) ಎಂದು ಜನರಾಡಿಕೊಳ್ಳುವಂತಾಗಿದೆ. ಯಾವುದೇ ಕಾರಣಕ್ಕೂ ಸರ್ಕಾರದ ಹಣ ಪೋಲಾಗಲು ಬಿಡುವುದಿಲ್ಲ. ಪ್ರವಾಸಿ ಬಂಗಲೆಯನ್ನು ಕೆಡವಲೂ ಬಿಡುವುದಿಲ್ಲ ಎಂದರು.
ಬ್ಲಾಕ್ ಕಾಂಗ್ರೆಸ್ ವಕ್ತಾರ ರಾಜೇಶ್ ಕಡಲಕೆರೆ (Block Congress spokesperson Rajesh Kadalkere) ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.