ಮೂಡುಬಿದಿರೆ: ಸಾವಿರಾರು ವರ್ಷಗಳಿಂದ ಜಗತ್ತಿನಲ್ಲಿ ಅತ್ಯದ್ಭುತ ಶಿಲ್ಪಗಳನ್ನು ರಚಿಸಿದವರು ವಿಶ್ವಕರ್ಮರು. ಪ್ರತಿಯೊಂದು ಶಿಲ್ಪ ಸೃಷ್ಟಿಯ ಹಿಂದೆಯೂ ವೈಜ್ಞಾನಿಕ ಚಿಂತನೆ ಅಡಗಿದೆ. ಹೀಗಾಗಿ ವಿಶ್ವಕರ್ಮರು (Vishwakarma) ಜಗತ್ತಿನ ಮೂಲವಿಜ್ಞಾನಿಗಳಾಗಿದ್ದಾರೆ ಎಂದು ನುಡಿದರು.
ಮೂಡುಬಿದಿರೆ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ (Sri Guru Math Kalikamba Temple) ವರ್ಷಾವಧಿ ಮಹೋತ್ಸವದ ಪ್ರಯುಕ್ತ ಮಂಗಳವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ವಿಶ್ವಕರ್ಮ ಸಮುದಾಯವು ಹಿಂದೂ ಧರ್ಮದ ಶ್ರೇಷ್ಠತೆಯಾದ ಶಿಲ್ಪ ಮತ್ತು ಬ್ರಾಹ್ಮಣ್ಯವನ್ನು ಉಳಿಸಿ ಬೆಳೆಸಿಕೊಂಡು ಬಂದಿರುವ ಏಕೈಕ ಸಮುದಾಯವಾಗಿದೆ. ವಿಶ್ವಕರ್ಮ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರವು ಅನುದಾನವನ್ನು ಒದಗಿಸಬೇಕು ಎಂದರು.
ಅಶ್ವತ್ಥಪುರ ಸೀತಾರಾಮಚಂದ್ರ ದೇವಸ್ಥಾನದ ಆಡಳಿತ ಮೊಕ್ತೇಸರ ರಘುನಾಥ ಎಲ್.ವಿ ಮಾತನಾಡಿ ವಿಶ್ವದಲ್ಲಿ ನಡೆಯುವ ಎಲ್ಲಾ ಕ್ರಿಯೆಗಳಲ್ಲಿ ವಿಶ್ವಕರ್ಮರ ಕೊಡುಗೆಯಿದೆ. ವಿಶ್ವಕರ್ಮರಿಲ್ಲದ ಸಮಾಜವನ್ನು ಊಹಿಸಲು ಅಸಾಧ್ಯ ಎಂದರು.
ಗೌರವ
ನಗರ ಮತ್ತು ಗ್ರಾಮಾಂತರ ಯೋಜನೆಯ ಜಂಟಿ ನಿರ್ದೇಶಕ ಆನಡ್ಕ ಎಸ್.ಸದಾನಂದ ಆಚಾರ್ಯ ಹಾಗೂ ವಿಶ್ವಕರ್ಮ ಸಹಕಾರ ಬ್ಯಾಂಕಿನ ಅಧ್ಯಕ್ಷ ಎಸ್.ಆರ್ ಹರೀಶ್ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಹಾಗೂ ನಿಡ್ಲೆ ಗ್ರಾಮ ಮೊಕ್ತೇಸರ ನಿಡ್ಲೆ ಗೋಪಾಲ ಆಚಾರ್ಯ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ (District Rajyotsava awardee) ರಂಗಭೂಮಿ ಕಲಾವಿದ (Theater artist) ಅಚ್ಯುತ ಆಚಾರ್ಯ ಮಾರ್ನಾಡ್, ಯುವ ಭಾಗವತರಾದ ಶ್ರೇಯಾ ಆಚಾರ್ಯ ಕಡಬ ಅವರನ್ನು ಗೌರವಿಸಲಾಯಿತು. ಸುನಂದ ಭಾಸ್ಕರ ಆಚಾರ್ಯ ಪಾಲ್ತಾಡಿ ಸ್ಮರಣಾರ್ಥ ವಿದ್ಯಾರ್ಥಿ ವೇತನ ಪುರಸ್ಕಾರವನ್ನು ಮೂಡುಮಾರ್ನಾಡಿನ ಸೌಮ್ಯ ಆಚಾರ್ಯ ಹಾಗೂ ದರೆಗುಡ್ಡೆಯ ಪ್ಲಾವಿಯಾ ಮೇನೇಜಸ್ ಅವರಿಗೆ ನೀಡಲಾಯಿತು. ಶೇ.100 ಕಾಲಾವಧಿ ಶಿಸ್ತು ಕಾಣಿಕೆ ಸಲ್ಲಿಸಿದ ಕೂಡುವಳಿಕೆ ಮೊಕ್ತೇಸರರನ್ನು ಹಾಗೂ ಕಾಣಿಕೆ ಡಬ್ಬಿಯಲ್ಲಿ ಅತೀ ಹೆಚ್ಚು ಮೊತ್ತ ಸಂಗ್ರಹಿಸಿದವರನ್ನು ಗೌರವಿಸಲಾಯಿತು.
ಮಧೂರು ಕಾಳಿಕಾಂಬಾ ಮಠದ (Madhur Kalikamba Math) ಅಧ್ಯಕ್ಷ ಕೆ.ಪ್ರಭಾಕರ ಆಚಾರ್ಯ ಮುಖ್ಯ ಅತಿಥಿಯಾಗಿದ್ದರು. ಕ್ಷೇತ್ರದ ಆಡಳಿತ ಮೊಕ್ತೇಸರ ಎನ್.ಜಯಕರ ಆಚಾರ್ಯ ಅಧ್ಯಕ್ಷತೆ ವಹಿಸಿದರು.
ಕ್ಷೇತ್ರದ ಮೊಕ್ತೇಸರರಾದ ಬಾಲಕೃಷ್ಣ ಆಚಾರ್ಯ ಉಳಿಯ, ಶಿವರಾಮ ಆಚಾರ್ಯ ಉಳಿಯ, ಕಾಳಿಕಾಂಬಾ ಸೇವಾಸಮಿತಿಯ (Kalikamba Seva Samiti) ಅಧ್ಯಕ್ಷ ಹರೀಶ್ಚಂದ್ರ ಆಚಾರ್ಯ ತಾಕೊಡೆ, ಕಾಳಿಕಾಂಬಾ ಮಹಿಳಾ ಸಮಿತಿಯ ಅಧ್ಯಕ್ಷೆ ಸುಜಾತ ಬಾಲಕೃಷ್ಣ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದನ್ನ ಓದಿ: ಪುತ್ತಿಗೆಯ ನವೀಕೃತ ನೂರಾನಿ ಮಸೀದಿಯಲ್ಲಿ ನಮ್ಮೂರ ನೋಡಬನ್ನಿ ಕಾರ್ಯಕ್ರಮ
ಇದೇ ಸಂದರ್ಭದಲ್ಲಿ ಶಾಂತಲಾ ಸೀತಾರಾಮ ಆಚಾರ್ಯ, ಶ್ರೀನಾಥ ಆಚಾರ್ಯ, ಶಿವಪ್ರಸಾದ್ ಆಚಾರ್ಯ, ಗೀತಾ ಯೋಗಿಶ್ ಆಚಾರ್ಯ, ವೈಶಾಲಿ ರಘುರಾಮ ಆಚಾರ್ಯ ಸನ್ಮಾನಪತ್ರ ವಾಚಿಸಿದರು.
ಶಿವರಾಮ ಆಚಾರ್ಯ ಸ್ವಾಗತಿಸಿದರು. ಭಾಸ್ಕರ ಆಚಾರ್ಯ ಬೆಳುವಾಯಿ ಕಾರ್ಯಕ್ರಮ ನಿರೂಪಿಸಿದರು. ಪತ್ರಕರ್ತ ಧನಂಜಯ ಮೂಡುಬಿದಿರೆ ವಂದಿಸಿದರು.