ಮೂಡುಬಿದಿರೆ: ಅಹಿಂಸಾ ಧರ್ಮ ಸರ್ವಜೀವ ದಯಾಪರವಾದ ಧರ್ಮ ಎಂದು ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ (Swastishri Charukirthi Bhattarak Panditacharya Swamiji of Jain Math) ನುಡಿದರು.
ಮೂಡುಬಿದಿರೆಯ ಬಡಗಬಸದಿ(Badagbasadi) ರಥೋತ್ಸವದಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಬಸದಿಗಳ ಮೊಕ್ತೇಸರರಾದ ಪಟ್ಣ ಶೆಟ್ಟಿ ಸುದೇಶ್, ದಿನೇಶ್, ಆದರ್ಶ್, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಬಿಜೆಪಿ ಮುಖಂಡ ಕೆ.ಪಿ ಜಗದೀಶ್ ಅಧಿಕಾರಿ, ಶೈಲೇಂದ್ರ ಕುಮಾರ್, ನಿರಂಜನ್ ಜೈನ್ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಧವಳತ್ರಯ ಜೈನ್ ಕಾಶಿ ಟ್ರಸ್ಟ್ (Jain Kashi Trust)ಆಶ್ರಯದಲ್ಲಿ ಅನನ್ಯಾ ಅವರಿಂದ ಭರತನಾಟ್ಯ ಮತ್ತು ಮಕ್ಕಿಮನೆ ಕಲಾವಿದರ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಜೈಪುರ್ ರಾಜಸ್ಥಾನ ಪ್ರಾಕೃತ ಆಚಾರ್ಯ(Jaipur Rajasthan Prakrit Acharya) 108 ಸುನೀಲ್ ಸಾಗರ್ ಮುನಿ 2550ರ ಭಗವಾನ್ ಮಹಾವೀರ ಸ್ವಾಮಿ ಅಹಿಂಸಾ ರಥ ದೇಶದ ನಾನಾ ಭಾಗಗಳಲ್ಲಿ ಸಂಚಾರ ಮಾಡುತ್ತಿದ್ದು, ಮೂಡುಬಿದಿರೆಗೆ ಆಗಮಿಸಿದ ಸಂದರ್ಭ ಭಟ್ಟಾರಕ ಸ್ವಾಮೀಜಿ ಹಾಗೂ ಶ್ರಾವಕರು ಸ್ವಾಗತಿಸಿದರು. ಅಹಿಂಸಾ ರಥ ಸಂಚಾಲಕ ಕುಲದೀಪ್ ಜೈನ್ ಉಪಸ್ಥಿತರಿದ್ದರು.