ಮೂಡುಬಿದಿರೆ: ಇರುವೈಲು ದಿಡ್ಡು ಶ್ರೀ ಧರ್ಮರಸು ಉಳ್ಳಾಯ ಕೊಡಮಣಿತ್ತಾಯ ದೈವಗಳ ಪುನರ್ ಪ್ರತಿಷ್ಠಾ ಮಹೋತ್ಸವವು ಕುಪ್ಪೆಪದವು ಐ ಕೃಷ್ಣ ಆಸ್ರಣ್ಣ ನೇತ್ರತ್ವದಲ್ಲಿ ಸೋಮವಾರ ನಡೆಯಿತು.
ದೈವಗಳ ಪ್ರತಿಷ್ಠೆ, ದಾನಿಗಳಿಂದ ಬಿಂಬ ಆಭರಣಗಳ ಸಮರ್ಪಣೆ , ಪ್ರತಿಷ್ಠಾ ಪ್ರದಾನ ಹೋಮ (Pratishtha Pradana Homa), ಕಲಶಾಭಿಷೇಕ ಹಾಗೂ ದೈವಗಳಿಗೆ ಪರ್ವ ಸೇವೆ, ಕೋಳಿ ಕುಂಟ ಮಹೂರ್ತ, ಕೊಡಮಣಿತ್ತಾಯ ದೈವ ದರ್ಶನ (Kodamanittaya God Darshan) ಹಾಗೂ ಧರ್ಮರಸು ಉಳ್ಳಾಯ ದೈವದ ನೇಮೋತ್ಸವ (Namotsava of Dharmarasu Ullaya Deity) ನಡೆಯಿತು.
ಇದನ್ನ ಓದಿ: ಆಳ್ವಾಸ್‌ನಲ್ಲಿ ಮನಸ್ವಿ 2023 ರಾಷ್ಟ್ರಮಟ್ಟದ ಸಮ್ಮೇಳನ
ಕ್ಷೇತ್ರದ ಪ್ರಧಾನರಾದ ಪ್ರಭಾಕರ ಪೂಜಾರಿ ದಿಡ್ಡು, ಗಡಿಕಾರರು ದೊಡ್ಡಗುತ್ತು ಜಗದೀಶ್ ಎಂ ಶೆಟ್ಟಿ, ದೇಜಮ್ಮ ಪೂಜಾರ್ತಿ ದಿಡ್ಡು, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ರುಕ್ಕಯ್ಯ ಪೂಜಾರಿ ಅಳಿಯೂರು, ಗೌರವಾಧ್ಯಕ್ಷರುಗಳಾದ ಉಮೇಶ್ ಜಿ.ಸಪಲಿಗ ಮಧುವನಗಿರಿ, ಚಂದ್ರಹಾಸ ಶೆಟ್ಟಿ ಕಿಟ್ಟುಬೆಟ್ಟು ದೊಡ್ಡಮನೆ,ನಾಗೇಶ್ ಅಮೀನ್ ಬಿಯಂದಕೋಡಿ, ಪದಾಧಿಕಾರಿಗಳಾದ ಸತೀಶ್ ಪೂಜಾರಿ ತಂಗಿಲ, ನವೀನ್ ಪೂಜಾರಿ ಕಿಟ್ಟುಬೆಟ್ಟು, ಬಬಿತ ಉಮೇಶ್ ಸಪಲಿಗ, ಧನಂಜಯ ನಾಯಕ್ ಪಂಜ, ಧರ್ಮಣ ಪೂಜಾರಿ ಕುಕ್ಕಿಮಾರ್, ನಾಗೇಶ್ ನಾಯಕ್ ಪಂಜ, ರಾಮಕೃಷ್ಣ ಪೆಜತ್ತಾಯ ಕುತ್ಯಾಡಿ, ಬಾಲಚಂದ್ರ ಶೆಟ್ಟಿ ಕುತ್ಯಾಡಿ, ಸೋಮಶೇಖರ ಕೋಟ್ಯಾನ್ ಅಣ್ಣುಕೋಡಿ,ದಿವಾಕರ ಪ್ರಭು ನಡುಬಾಳಿಕೆ, ಭಕ್ತರು ಉಪಸ್ಥಿತರಿದ್ದರು.