ಮೂಡುಬಿದಿರೆ: ಇಲ್ಲಿನ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ(Guru Math Kalikamba Temple) ವರ್ಷಾವಧಿ ಮಹೋತ್ಸವದ ಅಂಗವಾಗಿ ಕಾಳಿಕಾಂಬಾ ಸೇವಾ ಸಮಿತಿಯ ವತಿಯಿಂದ ವಿಶ್ವಕರ್ಮಸಮಾಜ ಬಾಂಧವರಿಗಾಗಿ (Vishwakarma Samaj Bandwar)ಕ್ರಿಕೆಟ್ ಪಂದ್ಯಾಟ ಮತ್ತು ಶಟ್ಲ್ ಬ್ಯಾಡ್ಮಂಟನ್ ಪಂದ್ಯವು Cricket (Tournament and Shuttle Badminton Match) ಮಹಾವೀರ ಕಾಲೇಜಿನಲ್ಲಿ ನಡೆಯಿತು.
ಗುರುಮಠ ಕಾಳಿಕಾಂಬಾ ದೇವಸ್ಥಾನದ (Guru Math Kalikamba Temple) ಆಡಳಿತ ಮೊಕ್ತೇಸರ ಜಯಕರ ಆಚಾರ್ಯ ಪುರೋಹಿತ್ ಪಂದ್ಯಾಟ ಉದ್ಘಾಟಿಸಿದರು.
ಇದನ್ನ ಓದಿ: ಮೂಡುಬಿದಿರೆಯಲ್ಲಿ 12ನೇ ರಾಜ್ಯಮಟ್ಟದ ರಾಣೆಯಾರ್ ಸಮಾವೇಶ
ಕ್ಷೇತ್ರದ ಮೊಕ್ತೇಸರರಾದ ಬಾಲಕೃಷ್ಣ ಆಚಾರ್ಯ ಉಳಿಯ, ಶಿವರಾಮ ಆಚಾರ್ಯ ಉಳಿಯ, ಕಾಳಿಕಾಂಬಾ ಸೇವಾ ಸಮಿತಿಯ ಅಧ್ಯಕ್ಷ ಹರಿಶ್ಚಂದ್ರ ಆಚಾರ್ಯ, ಕಾಳಿಕಾಂಬಾ ಮಹಿಳಾ ಸಮಿತಿಯ ಅಧ್ಯಕ್ಷೆ ಸುಜಾತ ಬಾಲಕೃಷ್ಣ ಆಚಾರ್ಯ ಹಾಗೂ ಕ್ಷೇತ್ರದ ಆಡಳಿತ ಮಂಡಳಿ ಮತ್ತು ಕಾಳಿಕಾಂಬಾ ಸೇವಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.