ಮೂಡುಬಿದಿರೆ: ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳ (Salary Allowance of State Government Employees) ಪರಿಷ್ಕರಣೆ ಹಾಗೂ ಹಳೇ ಪಿಂಚಣಿ ಯೋಜನೆಯನ್ನು (Old Pension Scheme) ಜಾರಿಗೊಳಿಸಲು ಸರ್ಕಾರವನ್ನು ಆಗ್ರಹಿಸಿ ಮಾರ್ಚ್ 1ರಿಂದ ನಡೆಯುವ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮೂಡುಬಿದಿರೆ ತಾಲೂಕು ಸಂಘಟನೆಯು ಬೆಂಬಲ ನೀಡುತ್ತದೆ ಎಂದು ಸಂಘದ ಅಧ್ಯಕ್ಷ ನಾಗೇಶ್ ಎಸ್. ಸುದ್ದಿಗೋಷ್ಠಿಯಲ್ಲಿ (News conference) ತಿಳಿಸಿದರು.
ಇದನ್ನ ಓದಿ: ಹುಡುಗಿಯ ಸ್ವರದಲ್ಲಿ ಕಾಲ್-ಹಣಕ್ಕಾಗಿ ಬ್ಲಾಕ್ ಮೇಲ್; ಮೂಡುಬಿದಿರೆ ಯುವಕನ ಬಂಧನ
ಸರ್ಕಾರಿ ನೌಕರರ ಹಲವು ಬೇಡಿಕೆಯನ್ನು ಈಡೇರಿಸುವಂತೆ ಸರ್ಕಾರಿ ನೌಕರರ ಸಂಘವು ಹಿಂದೆ ನಡೆಸಿದ್ದ ಅನಿರ್ಧಿಷ್ಟಾವಧಿ ಮುಷ್ಕರ ಸಂದರ್ಭ ಮನವಿ ಸ್ವೀಕರಿಸಿದ್ದ ಸಚಿವ ಡಾ.ಸುಧಾಕರ ಅವರು ಬೇಡಿಕೆಯ ಈಡೇರಿಸುವ ಭರವಸೆ ನೀಡಿದ್ದರು. ಆದರೆ ರಾಜ್ಯದ 2023-24ನೇ ಸಾಲಿನ ಆಯ-ವ್ಯಯದಲ್ಲಿ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಯಾವುದೇ ಪ್ರಸ್ತಾಪ ಮಾಡದಿರುವುದು ಸರ್ಕಾರಿ ನೌಕರರಿಗೆ ನಿರಾಸೆ ಮೂಡಿಸಿದೆ ಎಂದರು. ಸಂಘದ ಪದಾಧಿಕಾರಿಗಳಾದ ಬಸಪ್ಪ ನಾಶಿ, ಕಿಶೋರ್ ಕುಮಾರ್, ದೊರೆಸ್ವಾಮಿ ಕೆ.ಎಸ್., ಮೆಲ್ವಿನ್ ಅಲ್ಬುಕರ್ಕ್, ದಿನಕರ್ ಎಂ. ಸುದ್ದಿಗೋಷ್ಠಿಯಲ್ಲಿದ್ದರು.