ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ಜ್ಯೋತಿನಗರದಲ್ಲಿ (Jyothinagar) ಶನಿವಾರ ರಾತ್ರಿ ಕಾರೊಂದು ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ.
ಇದನ್ನ ಓದಿ: ಪಣಪಿಲದಲ್ಲಿ ಜಯ ವಿಜಯ ಜೋಡುಕರೆ ಕಂಬಳ
ಕಾಶಿಪಟ್ಣದ ಉಮೇಶ್ ( 49) ಮೃತಪಟ್ಟ ವ್ಯಕ್ತಿ.ಉಮೇಶ್ ಅವರು ಮೂಡುಬಿದಿರೆ ಕಡೆಯಿಂದ ಮಹಾವೀರ ಕಾಲೇಜು ರಸ್ತೆಗೆ (Mahaveera College Road) ಹೋಗುತ್ತಿದ್ದು ಜ್ಯೋತಿನಗರದಲ್ಲಿ ಕ್ರಾಸ್ ಆಗಿ ಮಸೀದಿ ರಸ್ತೆ ಹೋಗುವ ಸಂದರ್ಭ ಬಂಟ್ವಾಳದಿಂದ ಮೂಡುಬಿದಿರೆ ಕಡೆಗೆ ಬರುತ್ತಿದ್ದ ಕಾರು ಬೈಕ್ ಗೆ ಢಿಕ್ಕಿ ಹೊಡೆದು ರಸ್ತೆಯ ಪಕ್ಕಕ್ಕೆ ಎಸೆಯಲ್ಪಟ್ಟಿದ್ದರು. ರಕ್ತ ಸೋರುತ್ತಿದ್ದ ಉಮೇಶ್ (Umesh) ಅವರನ್ನು ತಕ್ಷಣ ಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ (Private Hospital) ಸಾಗಿಸಿದ್ದು ಅಲ್ಲಿ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಘಟನೆ ನಡೆದ ಸ್ಥಳಕ್ಕೆ ಮೂಡುಬಿದಿರೆ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.