ಮೂಡಬಿದಿರೆ: ಬೈಕಂಪಾಡಿಯ ಅಧಾನಿ ಕಂಪನಿಯಲ್ಲಿ (Bycompady Adhani Company) ಉದ್ಯೋಗದಲ್ಲಿರುವ ವ್ಯಕ್ತಿಯೋರ್ವರಿಗೆ ಹುಡುಗಿಯ ಸ್ವರದಲ್ಲಿ ಕಾಲ್ ಮಾಡಿ ಉಷಾ ಎಂದು ಪರಿಚಯಿಸಿಕೊಂಡು ಸಲುಗೆಯಿಂದ ಮಾತನಾಡುತ್ತಾ ,ವೀಡಿಯೋ ಕಾಲ್ (Video call) ಮಾಡಿ ಯಾವುದೋ ಹುಡುಗಿಯ ಖಾಸಗಿ ಅಂಗಗಳನ್ನು ತೋರಿಸಿ ಕೊನೆಗೆ ಹಣಕ್ಕಾಗಿ ಬ್ಲಾಕ್ ಮೇಲ್ (Black mail)ಮಾಡಿದ ಆರೋಪದಲ್ಲಿ ಮೂಡುಬಿದಿರೆ ಸಮೀಪದ ಯುವಕನೋರ್ವನನ್ನು ಪೊಲೀಸರು ಬಂಧಿಸಿ,ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಇದೀಗ ‘ಉಷಾ’ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾನೆ. ಅಂದಹಾಗೆ ಈ ‘ಉಷಾ’ ನ ಅಸಲಿ ಹೆಸರು ಧನಂಜಯ.ಮೂಡುಬಿದಿರೆ ಸಮೀಪದ ಬಿರಾವು ಪರಿಸರದವನು.
ಬೈಕಂಪಾಡಿಯಲ್ಲಿ(Baikampady) ಉದ್ಯೋಗಿಯಾಗಿರುವ ಸುರತ್ಕಲ್ ಹೊಸಬೆಟ್ಟು (Suratkal Hosabettu) ನಿವಾಸಿ ನವೀನ್ ಚಂದ್ರ ಎಂಬವರಿಗೆ ಒಂದು ಮೊಬೈಲ್ ನಂಬರ್ ನಿಂದ ಕಾಲ್ ಹೋಗುತ್ತದೆ.ಕಾಲ್ ಮಾಡಿದ ಧನಂಜಯ (Dananjaya) ಹುಡುಗಿಯ ಸ್ವರದಲ್ಲಿ ಮಾತನಾಡುತ್ತಾ ತನ್ನನ್ನು ಉಷಾ ಎಂದು ಪರಿಚಯಿಸಿಕೊಳ್ಳುತ್ತಾನೆ. ಹೀಗೆಯೇ ಮೊಬೈಲ್ ನಲ್ಲಿ ಮಾತನಾಡುತ್ತಾ ಸಲುಗೆಗೆ ಹೋಗಿ ಒಂದು ದಿನ ವೀಡಿಯೋ ಕಾಲ್ ನಲ್ಲಿ ಮಾತನಾಡುವ ಎಂದು ವೀಡಿಯೋ ಕಾಲ್ ಮಾಡಿ ಅದರಲ್ಲಿ ಯಾವುದೋ ಹುಡುಗಿಯ ಖಾಸಗಿ ಅಂಗಗಳನ್ನು ತೋರಿಸಿ ಇಬ್ಬರೂ ಮಾತನಾಡುವ ಸ್ಕ್ರೀನ್ ಶಾಟ್ (Screen shot) ತೆಗೆದು ಕೆಲ ದಿನಗಳ ಬಳಿಕ ಅದನ್ನು ನವೀನ ಚಂದ್ರರಿಗೆ ಕಳುಹಿಸಿ ನನಗೆ 25 ಸಾವಿರ ಹಣ ಕೊಡಬೇಕು, ಇಲ್ಲವಾದಲ್ಲಿ ಈ ವೀಡಿಯೋ ಕ್ಲಿಪ್ಪಿಂಗನ್ನು ಬೇರೆಯವರಿಗೆ ಕಳುಹಿಸುವುದಾಗಿ ಬೆದರಿಸಿದ್ದಾನೆ. ಇದರಿಂದ ಗಾಬರಿಗೊಂಡ ನವೀನ್ ಚಂದ್ರ ಅವರು ಒಮ್ಮೆ ಎರಡು ಸಾವಿರ ಗೂಗಲ್ ಪೇ ಮಾಡಿದ್ದಾರೆ. ಮತ್ತೆ ಕೆಲದಿನಗಳ ಬಳಿಕ ಕಾಲ್ ಮಾಡಿ ಮತ್ತೊಮ್ಮೆ 25 ಸಾವಿರಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ಈ ವೇಳೆಗಾಗಲೇ ನವೀನರಿಗೆ ತನಗೆ ಕಾಲ್ ಮಾಡುತ್ತಿರುವುದು ಉಷಾ ಅಲ್ಲ ಎಂದು ಅರಿವಿಗೆ ಬಂದಿದೆ.
ಇದನ್ನ ಓದಿ: ಕಲ್ಲಬೆಟ್ಟುವಿನಲ್ಲಿ ಮದ್ಯದಂಗಡಿ ತೆರೆಯದಂತೆ ಜನಜಾಗೃತಿ ಮನವಿ
ಈ ವಿಷಯವನ್ನು ತನ್ನ ಆಪ್ತರಲ್ಲಿ ಹೇಳಿಕೊಂಡಿದ್ದಾರೆ. ಅವರು ಪೊಲೀಸರಿಗೆ ದೂರು ನೀಡಲು ಸಲಹೆ ನೀಡಿದ್ದು ಅದರಂತೆ ನವೀನ್ ಚಂದ್ರ ಅವರು ಸುರತ್ಕಲ್ ಠಾಣೆಗೆ (Suratkal Station) ದೂರು ನೀಡಿದ್ದರು. ಪೊಲೀಸರು ಧನಂಜಯನನ್ನು ಇತ್ತೀಚೆಗೆ ಮೂಡುಬಿದಿರೆಯಿಂದ ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ (Court) ಹಾಜರುಪಡಿಸಿದ್ದರು. ಧನಂಜಯ ನ್ಯಾಯಾಂಗ ಬಂಧನದಲ್ಲಿದ್ದು ಗುರುವಾರ ಸಂಜೆ ಆತನಿಗೆ ಜಾಮೀನು ದೊರಕಿದೆ.