ಮೂಡುಬಿದಿರೆ: ವಕೀಲ (Lawyer) ಚೇತನ್ ಕುಮಾರ್ ಶೆಟ್ಟಿ (Chethan Kumar Shetty) ಅವರ ವಿರುದ್ಧ ಸುಳ್ಳು ಬರಹಗಳನ್ನು ವಾಟ್ಸಾಪ್‌ನಲ್ಲಿ ವೈರಲ್ ಮಾಡಿರುವುದಕ್ಕೆ ಸಂಬಂಧಿಸಿದಂತೆ 8 ಮಂದಿಯ ವಿರುದ್ಧ ಮೂಡುಬಿದಿರೆ ಠಾಣೆಯಲ್ಲಿ (Police station) ಪ್ರಕರಣ ದಾಖಲಾಗಿದೆ.ಇತ್ತೀಚಿಗೆ ಅಲಂಗಾರು (Alangar) ಸಮೀಪದ ಮನೆಯೊಂದರಲ್ಲಿ ಅಕ್ರಮ ಕಸಾಯಿಖಾನೆ ಮಾಹಿತಿಯ ಆಧಾರದಲ್ಲಿ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ದಾಳಿ ನಡೆಸಿ ದನದ ಮಾಂಸ ಸಹಿತ ಆರೋಪಗಳನ್ನು ಪತ್ತೆ ಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಭಾಸ್ಕರ ಪಾಲಡ್ಕಗೆ ರಾಜ್ಯಮಟ್ಟದ ವಿವೇಕಾನಂದ ಸದ್ಭಾವನ ಪ್ರಶಸ್ತಿ
ಕೆಲವು ದಿನಗಳ ಬಳಿಕ ಆರೋಪಿಗಳಿಗೆ ಹಿಂದೂ ಸಂಘಟನೆಯಲ್ಲಿದ್ದವರೇ ಆಗಿರುವ ಚೇತನ್ ಕುಮಾರ್ ಶೆಟ್ಟಿ ಅವರು ಜಾಮೀನು ಕೊಡಿಸಿದ್ದಾರೆ’ ಎನ್ನುವ ಅರ್ಥದಲ್ಲಿ ಶಮಿತ್ ರಾಜ್, ರಾಜೇಶ್, ಸಂದೀಪ್ ಹೆಗ್ಡೆ, ಉದಯ ಕುಮಾರ್ ಶೆಟ್ಟಿ, ದಯಾನಂದ ಹೆಗ್ಡೆ, ವಿಜಯ ಕೊಡಂಗಲ್ಲು, ಸಂದೀಪ್ ಸುವರ್ಣ ಹಾಗೂ ಶ್ರೀನಿವಾಸ್ ಎಂಬವರು ವಾಟ್ಸಾಪ್ ಗುಂಪುಗಳಲ್ಲಿ ಪ್ರಚಾರ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆದರೆ ಚೇತನ್ ಕುಮಾರ್ ಅವರು ಈ ಪ್ರಕರಣದ ವಕಾಲತ್ತು ಮಾಡಿಲ್ಲವೆನ್ನಲಾಗಿದೆ.