ಮೂಡುಬಿದಿರೆ: ಧೂಳು ಬರುವ ಹಾಗೆ ವಾಹನವನ್ನು ಚಲಾಯಿಸಬೇಡ. ನಿಧಾನವಾಗಿ ಹೋಗೆಂದು ಹೇಳಿದ ವ್ಯಕ್ತಿಗೆ ಟಿಪ್ಪರ್ ಚಾಲಕ(Tipper Driver) ರಾಡ್(Rod) ನಿಂದ ಹೊಡೆದು, ಟಿಪ್ಪರ್ ಚಲಾಯಿಸಿ ಕೊಲೆ ನಡೆಸಿದ್ದು, ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಟೆಬಾಗಿಲಿನ(Kotebagil) ನಿವಾಸಿ ಪಯಾಝ್ (61) ಹತ್ಯೆಗೀಡಾದ ವ್ಯಕ್ತಿ. ಪಯಾಜ್ ಶುಕ್ರವಾರ ಕೋಟೆಬಾಗಿಲು ಮಸೀದಿಗೆ ನಮಾಝ್ (Namaz)ಗೆ ತೆರಳುವ ಸಂಧರ್ಭ ಕೋಟೆಬಾಗಿಲು ನಿವಾಸಿ, ಟಿಪ್ಪರ್ ಚಾಲಕ ಆರೀಸ್ ಎಂಬಾತ ಅತೀ ವೇಗದಿಂದ ಟಿಪ್ಪರ್ ಚಲಾಯಿಸಿಕೊಂಡು ಹೋಗಿದ್ದು ಆಗ ಅಲ್ಲೇ ನಡೆದುಕೊಂಡು ಹೋಗುತ್ತಿದ್ದ ಫಯಾಝ್ ಅವರ ಮೇಲೆ ಧೂಳನ್ನು ಹಾರಿಸಿದ್ದಾನೆ. ಆಗ ಕೋಪಗೊಂಡ ಫಯಾಝ್ ಅವರು ನಿಧಾನ ಹೋಗುವಂತೆ ಹೇಳಿದ್ದು ಈ ಸಂದರ್ಭ ಇಬ್ಬರ ಮಧ್ಯೆ ಮಾತಿನ ಚಕಾಮಕಿ ನಡೆದಿದೆ. ನಮಾಜ್ ಮುಗಿಸಿಕೊಂಡು ಹಿಂತಿರುವ ಸಂದರ್ಭದಲ್ಲಿಯೂ ಇವರಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದಿದ್ದು ಈ ಸಂದರ್ಭ ಫಯಾಝ್ ಅವರು ಟಿಪ್ಪರ್ ನ ಸ್ಟೆಫ್ ಮೇಲೆ ಹೋಗಿ ಮಾತನಾಡಿದ್ದು, ಆಗ ಆರೀಸ್ ಮಾರಾಕಾಸ್ತ್ರದಿಂದ ತಲೆ ಭಾಗಕ್ಕೆ ಹೊಡೆದು ಟಿಪ್ಪರನ್ನು ಸ್ಟಾರ್ಟ್ ಮಾಡಿ ಮುಂದಕ್ಕೆ ಚಲಾಯಿಸಿದ್ದು ಆಗ ಆಯತಪ್ಪಿ ಫಯಾಝ್ ಅವರು ರಸ್ತೆಗೆ ಬಿದ್ದಿದ್ದಾರೆ. ಬಿದ್ದ ಅವರ ಮೇಲೇಯೇ ಟಿಪ್ಪರನ್ನು ಹಾಯಿಸಿದ್ದಾನೆ.
ರಾಡ್ ನ ಏಟು ಮತ್ತು ಟಿಪ್ಪರ್ ನ ಅಡಿಗೆ ಬಿದ್ದ ಫಯಾಝ್ ಅವರನ್ನು ಸಾರ್ವಜನಿಕರು ಆಸ್ಪತ್ರೆಗೆ ಸಾಗಿಸುವ ಸಂದರ್ಭ ಮೃತಪಟ್ಟರೆನ್ನಲಾಗಿದೆ. ಟಿಪ್ಪರ್ ಚಾಲಕ ಆರೀಸ್ ಟಿಪ್ಪರನ್ನು ಅರ್ಧ ದಾರಿಯಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಆರೀಸ್ ವಾಹನ ಚಲಾಯಿಸುವ ಸಂದರ್ಭದಲ್ಲಿ ಗಾಂಜಾ ಸೇವನೆ Drug addict)ಮಾಡಿದ್ದಾನೆಂದು ಸಾರ್ವಜನಿಕರು ಶಂಕಿಸಿದ್ದಾರೆ. ಚಾಲಕನ ಪತ್ತೆಗಾಗಿ ಮೂಡುಬಿದಿರೆ ಪೊಲೀಸರು ಬಲೆ ಬೀಸಿದ್ದಾರೆ.