ಮೂಡುಬಿದಿರೆ: ಕ್ಷುಲ್ಲಕ ಕಾರಣಕ್ಕೆ ನಡೆದ ಮಾತಿನ ಚಕಮಕಿಯು ವಿಕೋಪಕ್ಕೇರಿ ಬಾವನಿಂದ ಪತ್ನಿಯ ಸಹೋದರ ಕೊಲೆಯಲ್ಲಿ ಅಂತ್ಯವಾಗಿದೆ.
ಇದನ್ನ ಓದಿ: ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಿಂದ ಮೂವರು ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
ಗಂಟಾಲ್ಕಟ್ಟೆ ನಿವಾಸಿ ಜಮಾಲ್ (Jamal resident of Gantalkatte) ಮೃತಪಟ್ಟವರು. ಅವರ ಬಾವ ಚಿಕ್ಕಮಗಳೂರು ಮೂಲದ ಸಾಹೇಬ್ ಕೊಲೆ ಆರೋಪಿ ಯಾಗಿದ್ದಾನೆ. ಇಬ್ಬರ ಮನೆಯೂ ಅಕ್ಕಪಕ್ಕದಲ್ಲಿದ್ದು ಮಕ್ಕಳ ವಿಷಯದಲ್ಲಿ ಇವರಿಬ್ಬರ ನಡುವೆ ಮಾತಿನ ಚಕಮಕಿ (A spat of words) ನಡೆಯಿತೆನ್ನಲಾಗಿದೆ. ಕೋಪದ ಭರದಲ್ಲಿ ಅಲ್ಲೇ ಇದ್ದ ಚಾಕುವಿನಲ್ಲಿ ಸುಹೈಬ್ ತನ್ನ ಬಾವ ಎಂದು ನೋಡದೆ ಜಮಾಲ್ ನ ಹೊಟ್ಟೆಗೆ ಇರಿದಿದ್ದು ತೀವ್ರವಾಗಿ ಗಾಯಗೊಂಡ ಜಮಾಲ್ ಕೊನೆಯುಸಿರೆಳೆದಿ ದ್ದಾರೆ. ಆರೋಪಿ ಸುಹೈಲ್ (Accused Suhail) ನನ್ನು ಮೂಡುಬಿದಿರೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.