ಮೂಡುಬಿದಿರೆ: ಹೋಂ ನರ್ಸ್,(Home nurse) ಆಗಿ ಸೇವೆ ಮಾಡಲು ಬಂದು ವೃದ್ಧಗೆ ಅಸಹಜ ಲೈಂಗಿಕ ಕ್ರಿಯೆಗೆ ಪೀಡಿಸುತ್ತಿದ್ದ ಯುವಕನನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ ಘಟನೆ ಗುರುವಾರ ನಡೆದಿದೆ.
ಇದನ್ನ ಓದಿ: ಮಿಜಾರಿನಲ್ಲಿ ಅಪಘಾತ; ಯುವಕ ಪವಾಡ ಸದೃಶ ಪಾರು
ಕೊಡಂಗಲ್ಲು ಬಳಿಯ ಹುಡ್ಕೊ ಕಾಲನಿಯ (Hudko Colony) ನಿವಾಸಿ 68ರ ಹರೆಯದ ವೃದ್ಧಗೆ ಹೋಂ ನರ್ಸ್ ಆಗಿ ಗದಗದ 19 ರ ಯುವಕ ಶಿವಾನಂದ ಎಂಬಾತ ಕೆಲವು ಸಮಯದಿಂದ ನೋಡಿಕೊಳ್ಳುತ್ತಿದ್ದ. ವೃದ್ಧ ಕೆಲವು ದಿನಗಳಿಂದ ಮಂಕಾಗಿದ್ದರಿಂದ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಲಾಗಿತ್ತು. ಪದೇ ಪದೇ ವೃದ್ಧ ಅವರು ಹುಷಾರು ತಪ್ಪುತ್ತಿದ್ದರಿಂದ ಸಂಶಯಗೊಂಡ ಮನೆಯವರು ಯುವಕನ ಗಮನಕ್ಕೆ ಬಾರದಂತೆ ಕೋಣೆಗೆ ಸಿಸಿ ಕೆಮರಾವನ್ನು (CC Camera) ಅಳವಡಿಸಿದ್ದು ಅದರಲ್ಲಿ ಯುವಕ ವೃದ್ಧಗೆ ಹೊಡೆದು ಅಸಹಜ ಲೈಂಗಿಕ ಕ್ರಿಯೆ ಒತ್ತಾಯಿಸುತ್ತಿರುವುದು ವೀಡಿಯೋ ಚಿತ್ರೀಕರಣಗೊಂಡಿದೆ.