ಮೂಡುಬಿದಿರೆ: ಹೃದಯಾಘಾತ(Heartattack) ಸಾವನ್ನಪ್ಪುವವರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಯುವಜನರು ಸಹಿತ ಮಕ್ಕಳು ಕೂಡಾ ಹೆಚ್ಚು ಹೃದಯಾಘಾತಗಳಿಗೆ ಬಲಿಯಾಗುತ್ತಿರುವುದು ವಿಷಾದನೀಯ. ಸಾಮಾನ್ಯ ಜನರು ತಮಗೆ ಯಾವುದೇ ಕಾಯಿಲೆಗಳಲ್ಲವೆಂದೇ ಆರೋಗ್ಯದ ಬಗ್ಗೆ ನಿರ್ಲಕ್ಷ್ಯವನ್ನು ತೋರದೆ, ಆರೋಗ್ಯ ತಪಾಸಣೆಯನ್ನು ನಡೆಸಬೇಕೆಂದು ಹೃದಯರೋಗ ತಜ್ಞ ಡಾ.ಮನೀಷ್ ರೈ(Heart Specialist Dr Manish Rai) ಹೇಳಿದರು.
ಮಂಗಳೂರು ಕೆ.ಎಂ.ಸಿ (KMC Hospital)ಆಸ್ಪತ್ರೆ ಅತ್ತಾವರ ಹಾಗೂ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಸಹಯೋಗದಲ್ಲಿ ಅಳಿಯೂರಿನ ಹೇಮಾ ಸಭಾಭವನದಲ್ಲಿ ನಡೆದ ಉಚಿತ ಆರೋಗ್ಯ ತಪಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಮಾಜಿ ಸಚಿವ ಅಭಯಚಂದ್ರ ಜೈನ್(Abhayachandra Jain), ಕೆಪಿಸಿಸಿ(KPCC) ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಶಿರ್ತಾಡಿ ಗ್ರಾಪಂ ಅಧ್ಯಕ್ಷ ಸಂತೋಷ್ ಕೋಟ್ಯಾನ್, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರ, ಎಪಿಎಂಸಿ ಮಾಜಿ ಅಧ್ಯಕ್ಷ ಪ್ರವೀಣ್ ಜೈನ್, ಸದಸ್ಯ ಚಂದ್ರಹಾಸ ಸನಿಲ್, ಕಾಂಗ್ರೆಸ್ ಮುಖಂಡ ವಸಂತ ಬೆರ್ನಾಡ್, ಹೇಮಾ ಸಭಾಭವನದ ಮಾಲಕರಾದ ಹೇಮಾವತಿ ಹಾಗೂ ಕೆ.ಕೆ ಪೂಜಾರಿ ಉಪಸ್ಥಿತರಿದ್ದರು. ಯುವ ಕಾಂಗ್ರೆಸ್ ಅಧ್ಯಕ್ಷ ಜಯಕುಮಾರ್ ಕಾರ್ಯಕ್ರಮ ನಿರೂಪಿಸಿದರು.