ಮೂಡುಬಿದಿರೆ: ತಾಯಿ ಮೊಬೈಲ್ ಕೊಡಲಿಲ್ಲ ಎಂಬ ಸಿಟ್ಟಿನಲ್ಲಿ ಅಪ್ರಾಪ್ತೆ ಮಗಳು ಬಾವಿಗೆ ಹಾರಿ ಆತ್ಮಹತ್ಯೆ (Suicide);ಮಾಡಿಕೊಂಡ ಘಟನೆ ವಾಲ್ಪಾಡಿ ಗ್ರಾಮದ ನಾಗಂದಡ್ಡ (Nagandadda of Valpadi village) ಎಂಬಲ್ಲಿ ಭಾನುವಾರ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡಾಕೆ ಉಮೇಶ್ ಪೂಜಾರಿ ಅವರ ಪುತ್ರಿ ಯುತಿ(15)ಎಂದು ತಿಳಿದುಬಂದಿದೆ. ಅಳಿಯೂರು ಪ್ರೌಢಶಾಲೆಯ (Aliyur High School) ಹತ್ತನೆ ತರಗತಿ ವಿದ್ಯಾರ್ಥಿನಿ. ಭಾನುವಾರ ಬೆಳಿಗ್ಗೆ ತಂದೆ ಕೂಲಿ ಕೆಲಸಕ್ಕೆಂದು ಹೊರಹೋಗಿದ್ದರು. ಸ್ವಲ್ಪ ಹೊತ್ತಿನ ಬಳಿಕ ತಾಯಿ ಮತ್ತು ಕಿರಿಯ ಮಗಳು ಶಿರ್ತಾಡಿಗೆ ಹೊರಟಿದ್ದರು. ಹಿರಿಯ ಮಗಳು ಯುತಿಯನ್ನು ಕೂಡ ಬರಲು ಹೇಳಿದಾಗ ನನಗೆ ಬರೆಯಲು ಇದೆ ನಾನು ಬರುವುದಿಲ್ಲ ಎಂದಾಕೆ ತಾಯಿಯಲ್ಲಿದ್ದ ಮೊಬೈಲ್ ಕೊಡುವಂತೆ ಕೇಳಿದ್ದಳು ಎನ್ನಲಾಗಿದೆ. ‘ಮೊಬೈಲ್ (Mobile) ಈಗ ಕೊಡುವುದಿಲ್ಲ ಶಿರ್ತಾಡಿಯಿಂದ ವಾಪಾಸು ಬಂದ ಮೇಲೆ ಕೊಡುತ್ತೇನೆ’ ಎಂದು ಹೇಳಿ ತಾಯಿ ಹಾಗೂ ಕಿರಿಯ ಮಗಳು ಹೊರಟು ಹೋದರೆನ್ನಲಾಗಿದೆ.
ಇದನ್ನ ಓದಿ: ಮೂಡುಬಿದಿರೆ ಪ್ರವಾಸಿ ಬಂಗಲೆ ಕೆಡವಲು ಹುನ್ನಾರ; ಕೆ.ಅಭಯಚಂದ್ರ ಜೈನ್ ಆರೋಪ
ಮಧ್ಯಾಹ್ನ ಮನೆಗೆ ವಾಪಾಸಾದಾಗ ಮನೆಯಲ್ಲಿ ಮಗಳು ಇರಲಿಲ್ಲ. ಹುಡುಕಾಡಿದಾಗ ಅಪರಾಹ್ನ ಸುಮಾರು 4 ಗಂಟೆ ಹೊತ್ತಿಗೆ ಮನೆ ಹತ್ತಿರದ ಬಾವಿಯಲ್ಲಿ ಮಗಳ ಶವ ಪತ್ತೆಯಾಗಿದೆ.
ಓದಿನಲ್ಲಿ ಪ್ರತಿಭಾನ್ವಿತಳಾಗಿದ್ದ ಯುvತಿ ಪಠ್ಯೇತರ ವಿಷಯದಲ್ಲು ಮುಂದಿದ್ದಳು ಎನ್ನಲಾಗಿದೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.