ಮೂಡುಬಿದಿರೆ: ಇಲ್ಲಿನ ಅಲಂಗಾರು ಬಸವನಕಜೆ ನಿವಾಸಿ (Resident of Basavanakaje), ಅಲಂಕಾರ ತಜ್ಞೆ ಅನುಪಮಾ ಕಾಮತ್ (54) ಅಲ್ಪ ಕಾಲದ ಅಸ್ವಾಸ್ಥ್ಯದಿಂದ ಸೋಮವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಅವರು ಪತಿ ಹೈನೋದ್ಯಮಿ ಎಂ. ಗಣೇಶ್ ಕಾಮತ್, ಓರ್ವ ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
ಇದನ್ನ ಓದಿ: ಸುಖಾನಂದ ಶೆಟ್ಟಿ, ಪ್ರಶಾಂತ್ ಪೂಜಾರಿ ಟ್ರೋಫಿ ಕಬಡ್ಡಿ ಪಂದ್ಯಾಟ
ಜೆಒಸಿ ಡಿಪ್ಲೊಮಾ (JOC Diploma) ಪದವೀಧರೆಯಾಗಿದ್ದ ಅನುಪಮಾ ಕಾಮತ್ ಕಳೆದ ಎರಡು ದಶಕಗಳಿಂದ ಪ್ರಸಾದನ, ವಧು ಅಲಂಕಾರ ತಜ್ಞೆಯಾಗಿ (Beautician) ಕಾರ್ಯನಿರ್ವಹಿಸುತ್ತಿದ್ದರು. ಹೂವಿನ ಆಲಂಕಾರಿಕ ಹಾರಗಳ ತಯಾರಿಯಲ್ಲೂ ವಿಶೇಷ ಪರಿಣತೆಯಾಗಿದ್ದ ಅವರು ಮೂಡುಬಿದಿರೆ ಪೊನ್ನೆಚಾರಿ ಶಾರದೆಯ ಶೋಭಾಯಾತ್ರೆಗೆ ದೇವಿಗೆ ಮಲ್ಲಿಗೆಯ ವಿಶೇಷ ಪುಷ್ಪಾಲಂಕಾರವನ್ನೂ ಕಳೆದ ಕೆಲವು ವರ್ಷಗಳಿಂದ ನಡೆಸಿಕೊಂಡು ಬಂದಿದ್ದರು. ಬಿಜೆಪಿಯ ಸಕ್ರಿಯ ಕಾರ್ಯಕರ್ತೆ ಯಾಗಿ ಗುರುತಿಸಿಕೊಂಡಿದ್ದ ಅವರು ಬಸವನಕಜೆ ಪರಿಸರದಲ್ಲಿ ಪಂಚಾಯತ್ ಚುನಾವಣೆಯಲ್ಲೂ ಈ ಹಿಂದೆ ಸ್ಪರ್ಧಿಸಿದ್ದರು.