ಮೂಡುಬಿದಿರೆ: ಶ್ರವಣಬೆಳಗೊಳ ಭಟ್ಟಾರಕ ಸ್ವಾಮೀಜಿ (Bhattarak Swamiji of Shravanabelagola) ಧವಳ ಗ್ರಂಥಗಳನ್ನು (Dhavala Granth) ಕನ್ನಡಕ್ಕೆ ಅನುವಾದಿಸಿದ ಶಕ್ತಿ. ಶ್ರೇಷ್ಠ ತಪಸ್ವಿಯಾಗಿದ್ದ, ಪೂಜ್ಯರು ಚಾತುರ್ಮಾಸ ಸಮಯದಲ್ಲಿ ಮೌನಧಾರಣೆಯನ್ನು ಮಾಡುತಿದ್ದರು. ಶಿಸ್ತಿನ ಸಿಪಾಯಿಯಾಗಿದ್ದವರು. ಯಾವುದೇ ಕಾರ್ಯಕ್ರಮ ಸಂಘಟಿಸುವ ಚಾಕಚಕ್ಯತೆ ಅವರಲ್ಲಿತ್ತು. ಪಟ್ಟಾಚಾರ್ಯರನ್ನು, ಸಂತರನ್ನು ಸಂಘಟಿಸಿ ಸತ್ಸಂಗವನ್ನು ಏರ್ಪಡಿಸುತಿದ್ದವರು. ಬಲು ಅಪರೂಪದ ಅವತಾರ ಪುರುಷರನ್ನು ನಾವು ಕಳೆದುಕೊಂಡಿದ್ದೇವೆ ಎಂದು ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚರ್ಯವರ್ಯ ಸ್ವಾಮೀಜಿ (Swastishree Bhattarak Charukeerthi Panditacharya Swamiji) ಸಂತಾಪ ವ್ಯಕ್ತಪಡಿಸಿದ್ದಾರೆ.
ಇದನ್ನ ಓದಿ: ನಾಲ್ಕನೇ ವೈದಿಕ್ ಪ್ರೀಮಿಯರ್ ಲೀಗ್ ಭಟ್ಜೀಸ್ ಸೂಪರ್ ಕಿಂಗ್ಸ್ ತಂಡಕ್ಕೆ ವಿಪಿಎಲ್ 2023 ಟ್ರೋಫಿ
1999-2000 ಕಾಲಘಟ್ಟದಲ್ಲಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಕನಸಿನ ಕೂಸಾಗಿದ್ದ ಧವಳ ಗ್ರಂಥಗಳ 39 ಭಾಗಳಲ್ಲಿನ ಎರಡು ಭಾಗಗಳನ್ನು ರಾಷ್ಟ್ರಪ್ರಶಸ್ತಿ (National Award) ಪುರಸ್ಕೃತ ಸುಬ್ಬಯ್ಯ ಶಾಸ್ತ್ರಗಳು ಅನುವಾದಿಸಿ ಉಳಿದ 37 ಭಾಗಗಳನ್ನು ಕರ್ನಾಟಕದ ವಿವಿಧ ಮೂಲೆಗಳಿಂದ 23 ವಿದ್ವಾಂಸರನ್ನು (23 scholars) ಕರೆಸಿ ಧವಳ ಗ್ರಂಥಗಳನ್ನು ಆಧುನಿಕ ಕನ್ನಡಕ್ಕೆ ಅನುವಾದಿಸಿ ರಾಜ್ಯಕ್ಕೆ ನೀಡಿದ್ದಾರೆ ಎಂದು ಶ್ರವಣಬೆಳಗೊಳ ಸ್ವಾಮೀಜಿಯವರ ಕೆಲಸವನ್ನು ನೆನಪಿಸಿಕೊಂಡಿದ್ದಾರೆ.