ಮೂಡುಬಿದಿರೆ: ಹಾಲಿನ ಹಿರಿಯ ವ್ಯಾಪಾರಿಯಾಗಿದ್ದ (A senior milk trader) ಫ್ರಾನ್ಸಿಸ್ ಪಿಂಟೋ (Francis Pinto) (72ವರ್ಷ) ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ಇಲ್ಲಿನ ಬಸ್ ನಿಲ್ದಾಣ ಬಳಿ ಇರುವ ತಮ್ಮ ನಿವಾಸದಲ್ಲಿ ನಿಧನ ಹೊಂದಿದರು .ಅವರು ಪತ್ನಿ ,ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ ತನ್ನ ತಂದೆ ಇಗ್ನೇಶಿಯಸ್ ಎಲ್. ಪಿಂಟೋ ಅವರು ನಡೆಸುತ್ತಿದ್ದ ಹಾಲು ವ್ಯಾಪಾರದಲ್ಲಿ ಎಳವೆಯಿಂದಲೇ ಸಹಕರಿಸಿಕೊಂಡು ಬಂದಿದ್ದ ಫ್ರಾನ್ಸಿಸ್ ಪಿಂಟೋ ಕಳೆದ ಐದು ದಶಕಗಳಿಂದ ಮೂಡುಬಿದಿರೆ ಪೇಟೆಯ ಬಹುಪಾಲು ಮಂದಿಗೆ ಇತ್ತೀಚಿನವರೆಗೂ ಹಾಲು ವಿತರಕರಾಗಿದ್ದರು. ಜಿಲ್ಲೆಯಲ್ಲಿ ಸಹಕಾರಿ ಹಾಲು ಒಕ್ಕೂಟದ ಸಂಘಟನೆಗಳ ಬಳಿಕ ತಮ್ಮ ಪಿಂಟೋ ಮಿಲ್ಕ್ ಡೈರಿಯನ್ನು (Milk Dairy) ಮುನ್ನಡೆಸಿಕೊಂಡು ಹಾಲು ಸಂಗ್ರಹಿಸಿ ವಿತರಿಸುತ್ತಿದ್ದರು.
ಇದನ್ನ ಓದಿ: ಪೇಪರ್ ಮಿಲ್ಲ್ ನಿವಾಸಿ ಶತಾಯುಷಿ ಕೂಸು ಆರ್. ಸಪಳಿಗ ನಿಧನ
ಮೂಡುಬಿದಿರೆ ಕೊರ್ಪುಸ್ ಕ್ರಿಸ್ತಿ ಚರ್ಚಿನ (Corpus Christi Church) ವಾರ್ಡ್ ಗುರಿಕಾರ ರಾಗಿ ,ಚರ್ಚ್ ಪಾಲನ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಅವರು ಸಕ್ರಿಯ ಕಾರ್ಯಕರ್ತರಾಗಿ ಜನಾನುರಾಗಿಯಾಗಿದ್ದರು.