ಮೂಡುಬಿದಿರೆ: ಜಿ.ಕೆ. ಎಂಟರ್‌ಪ್ರೈಸಸ್ (G.K. Enterprises) ಮಾಲಕ ಗಣೇಶ್ ಕಾಮತ್ (Owner Ganesh Kamat) ಶುಕ್ರವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ, ಪುತ್ರಿ ಅಗಲಿದ್ದಾರೆ.
ಮೂಡುಬಿದಿರೆಯಲ್ಲಿರುವ ತನ್ನ ಎಂಟರ್ ಪ್ರೈಸಸ್‌ಗೆ ಆಗಮಿಸುತ್ತಿದ್ದಾಗ ಹೃದಯದ ನೋವಿಗೊಳಗಾಗಿ ಆಸ್ಪತ್ರೆ ಸೇರುವಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ಇದನ್ನ ಓದಿ: ಬಲಿಪ ಕುಟುಂಬಕ್ಕೆ ಪ್ರಧಾನಿ ಮೋದಿ ಸಂತಾಪ ಸಂದೇಶ
ಕಾರ್ಕಳದ ಗಾಂಧಿ ಮೈದಾನದಲ್ಲಿ ಹಗಲು-ರಾತ್ರಿ ಕ್ರಿಕೆಟ್ ಪಂದ್ಯಾಟಕ್ಕಾಗಿ (Day-night cricket tournament) ಲೈಟಿಂಗ್ಸ್ ಅಳವಡಿಸುತ್ತಿದ್ದಾಗ ವಿದ್ಯುತ್ ಆಘಾತಕ್ಕೊಳಗಾಗಿ (Electric shock) ತನ್ನೆರಡು ಕೈಗಳನ್ನು ಕಳೆದುಕೊಂಡರೂ ಧೃತಿಗೆಡದೆ ತನ್ನದೇ ಆದ ಜಿ.ಕೆ. ಎಂಟರ್‌ಪ್ರೈಸಸ್ ಉದ್ಯಮವನ್ನು ಪ್ರಾರಂಭಿಸಿದ್ದರು. ಕಳೆದ ಕೆಲವು ವರ್ಷಗಳ ಹಿಮದೆಯಷ್ಟೆ ಪಡುಮಾರ್ನಾಡಿನಲ್ಲಿ ಜಿ.ಕೆ ಗಾರ್ಡನ್ ಅನ್ನು ಪ್ರಾರಂಭಿಸಿ ಮುನ್ನಡೆಸುತ್ತಿದ್ದರು.
ಜಿ.ಕೆ. ಎಂಟರ್‌ಪ್ರೈಸಸ್ ಮಾಲಕ ಗಣೇಶ್ ಕಾಮತ್ ಶುಕ್ರವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ, ಪುತ್ರಿ ಅಗಲಿದ್ದಾರೆ.