ಮೂಡುಬಿದಿರೆ: ನಿವೃತ್ತ ಗ್ರಾಮಕರಣಿಕ (Retired Grammarian), ಮೂಡುಬಿದಿರೆ ಸ್ವರಾಜ್ಯ ಮೈದಾನ ಬಳಿಯ ಸಂಪದ ನಿವಾಸಿ ಪದ್ಮರಾಜ್ ಆಳ್ವ (77) ಗುರುವಾರ ಸ್ವಗೃಹದಲ್ಲಿ ನಿಧನ ಹೊಂದಿದರು. ಪತ್ನಿ, ಇಬ್ಬರು ಪುತ್ರರನ್ನು ಅವರು ಅಗಲಿದ್ದಾರೆ.
ಇದನ್ನ ಓದಿ: ಹೊಸಬೆಟ್ಟು ಗ್ರಾಪಂ ಮಾಜಿ ಅಧ್ಯಕ್ಷೆ ಜಾನಕಿ ನಿಧನ
ಬಜಗೋಳಿ, ರೆಂಜಾಳ, ಹೊಸ್ಮಾರು, ಮುಂಡ್ಕೂರು ಮೊದಲಾದ ಕಡೆ ಗ್ರಾಮಕರಣಿಕರಾಗಿ ಕರ್ತವ್ಯ ನಿರ್ವಹಿಸಿದ್ದ ಅವರು ಮೂಡುಬಿದಿರೆ ಜೈನ್ ಮಿಲನ್ ನಲ್ಲಿ ಸಕ್ರಿಯರಾಗಿದ್ದು, 2007-08 ರಲ್ಲಿ ಕೋಶಾಧಿಕಾರಿಯಾಗಿ (Treasurer) ಸೇವೆ ಸಲ್ಲಿಸಿದ್ದರು.