ಮೂಡುಬಿದಿರೆ: ಮಾರೂರು ಗ್ರಾಮದ ಮೇಲಂದಗುಡ್ಡೆ(Melandagudde) ನಿವಾಸಿ ಮಂಜುನಾಥ ಆಚಾರ್ಯ( 56) ಅಲ್ಪಕಾಲದ ಅಸೌಖ್ಯದಿಂದ ಜನವರಿ 12 ರಂದು ಸ್ವಗೃಹದಲ್ಲಿ ನಿಧನರಾದರು.
ವೃತ್ತಿಯಲ್ಲಿ ಕಾಷ್ಠಶಿಲ್ಪಿಯಾಗಿದ್ದು ಹಲವಾರು ಶಿಷ್ಯಂದಿರನ್ನು ರೂಪಿಸಿದ್ದರು. ಅವರು ಕಲ್ಲಬೆಟ್ಟು ವಿಶ್ವಕರ್ಮ(VishwaKarma) ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷರಾಗಿದ್ದರು. ಅವರಿಗೆ ಪತ್ನಿ, ಯಕ್ಷಗಾನ ಕಲಾವಿದ (Yakshagana Artist)ವಿಘ್ನೇಶ್ ಸಹಿತ ಇಬ್ಬರು ಪುತ್ರರು ಇದ್ದಾರೆ.