ಮೂಡುಬಿದಿರೆ: ಬಲಿಪ ನಾರಾಯಣ ಭಾಗವತರು (Balipa Narayana Bhagavatha) ಯಕ್ಷಗಾನ ರಂಗದ ಕೊಹಿನೂರ್ ವಜ್ರ (The Kohinoor diamond of the Yakshagana arena) . ಆ ವಜ್ರವನ್ನು ನಾವು ಕಳೆದುಕೊಂಡಂತಗಿದೆ ಎಂದು ಧರ್ಮದರ್ಶಿ ಹರಿಕೃಷ್ಣ ಪುನರೂರು (Dharmadarshi Harikrishna Punarooru) ಹೇಳಿದರು.
ಅವರು ಯಕ್ಷಗಾನ ರಂಗದ ಭಾಗವತಿಕೆಯ ಭೀಷ್ಮ ಬಲಿಪ ನಾರಾಯಣ ಭಾಗವತರ (Balipa Narayana Bhagavatara)ಮಾರೂರಿನ ನೂಯಿ ನಿವಾಸ, ಬಲಿಪ ಭವನದ ಅಂಗಳದಲ್ಲಿ ಬುಧವಾರ ನಡೆದ ಬಲಿಪ ಗಾನ-ನುಡಿನಮನದಲ್ಲಿ ಪಾಲ್ಗೊಂಡು ಮಾತನಾಡಿದರು.
ಶ್ರೀಕ್ಷೇತ್ರ ಕಟೀಲಿನ ಶ್ರೀ ಹರಿನಾರಾಯಣ ಆಸ್ರಣ್ಣ (Sri Harinarayana Asranna of Srikshetra Kateel) ಬಲಿಪರು ಕಟೀಲಿನ ಬಾಲ ಮೇಳದ ಬಗ್ಗೆ ಬಲಿಪರ ಕಾಳಜಿ, ಬದಲಾವಣೆಗಳ ತಾಕಲಾಟದ ನಡುವೆಯೂ ಶೈಲಿಯ ಶುದ್ಧತೆಯಲ್ಲಿ ರಾಜೀಮಾಡಿಕೊಳ್ಳದೇ ಅವರು ಕಾಯ್ದುಕೊಂಡ ಕಲಾಧರ್ಮವನ್ನು ಶ್ಲಾಘಿಸಿದರು.
ಡಾ.ಪ್ರಭಾಕರ ಜೋಷಿ (Dr. Prabhakar Joshi) ಪ್ರಾಸ್ತಾವಿಕ ಮಾತನಾಡಿದರು. ಕಲಾವಿದರಾದ ಗೋವಿಂದ ಭಟ್, ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ (Moodambailu Gopalakrishna Shastri) ಬಲಿಪರ ಜತೆಗಿನ ವೃತ್ತಿ ಒಡನಾಟವನ್ನು ಹಂಚಿಕೊಂಡರು. ಪಟ್ಲ ಸತೀಶ್ ಶೆಟ್ಟಿ (Patla Satish Shetty) ಅವರು ಬಲಿಪ ಗುರುಗಳು ತನ್ನ ಪ್ರತಿಷ್ಠಾನಕ್ಕೆ ನೀಡಿದ ಒಲವಿನ ದೇಣಿಗೆ, ಭಾಗವತಿಕೆಯ ಶಿಕ್ಷಣ ಧಾರೆ ಎರೆದ ರೀತಿಯನ್ನು ಸ್ಮರಿಸಿಕೊಂಡರು. ಸುಳ್ಳದ ಚಂದ್ರಶೇಖರ ದಾಮ್ಲೆ ಬಲಿಪರ ಯಕ್ಷಗಾನ ಪೂರ್ವರಂಗದ ಹಾಡುಗಾರಿಕೆಯ ದಾಖಲಾತಿ ನಡೆಸಿದ ಮೊದಲ ಆಡಿಯೋ ಕ್ಯಾಸೆಟ್ (Audio cassette) ಸಂದರ್ಭವನ್ನು ನೆನಪಿಸಿಕೊಂಡರು.
ಯಕ್ಷ `ಗಾನ’ ನಮನ:
ಬಲಿಪರ ಪುತ್ರ ಕಟೀಲು ಮೇಳದ (Katilu Mela) ಭಾಗವತ ಬಲಿಪ ಶಿವಶಂಕರ ಭಟ್ (Bhagavata Balipa Sivashankar Bhatt of Katilu Mela), ಬಲಿಪರ ಶಿಷ್ಯ ಬಟ್ಯಮೂಲೆ ಲಕ್ಷ್ಮಿ ನಾರಾಯಣ ಭಟ್ ಅವರು ಪ್ರಸಂಗಕರ್ತ ಶ್ರೀಧರ ಡಿ.ಎಸ್. ಅವರು ರಚಿಸಿದ ಬಲಿಪ ನಮನ (Sacrifice bow) ಯಕ್ಷಗಾನೀಯ ಪದ್ಯಗಳಿಗೆ ಭಾಗವತಿಕೆಯ ದನಿಯಾದರು. ಭಾಗವತರುಗಳಾದ ಪುತ್ತಿಗೆ ರಘುರಾಮ ಹೊಳ್ಳ, ಹೊಸಮೂಲೆ ಗಣೇಶ ಭಟ್, ರಾಮಕೃಷ್ಣ ಮಯ್ಯ ಸಿರಿಬಾಗಿಲು, ರವಿಚಂದ್ರ ಕನ್ನಡಿಕಟ್ಟೆ, ಸತ್ಯನಾರಾಯಣ ಪುಣಿಚಿತ್ತಾಯರು ಬಲಿಪರಿಗೆ ಭಾಗವತಿಕೆಯ ಗಾನನಮನ ಸಲ್ಲಿಸಿದರು. ಹಿಮ್ಮೇಳದಲ್ಲಿ ಲಕ್ಷ್ಮೀಶ ಅಮ್ಮಣ್ಣಾಯ, ಚಂದ್ರಶೇಖರ ಭಟ್ ಕೊಂಕಣಾಜೆ, ಗಣೇಶ ಭಟ್ ಬೆಳಾಲು, ಕೌಶಿಕ್ ರಾವ್ ಪುತ್ತಿಗೆ, ಮುರಾರಿ ಪಂಜಿಗದ್ದೆ ಸಹಕರಿಸಿದರು.
ಇದನ್ನ ಓದಿ: Balipa Narayana Bhagavatha: ಫೆ.23ರಂದು ಬಲಿಪ ಭಾಗವತ ಶ್ರದ್ಧಾಂಜಲಿ ಸಭೆ
ಮಾಜಿ ಸಚಿವ ಕೆ. ಅಭಯಚಂದ್ರ (Former Minister K. Abhay Chandra), ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ (BJP District President Sudarshan M), ಉದ್ಯಮಿ ಕೆ. ಶ್ರೀಪತಿ ಭಟ್, ಭುವನಾಭಿರಾಮ ಉಡುಪ, ಪ್ರದೀಪ್ ಕುಮಾರ್ ಕಲ್ಕೂರಾ, ಕಲಾವಿದರಾದ ಶ್ರೀಧರ ಡಿ,ಎಸ್, ಮುರಳಿ ಕಡೆಕಾರ್, ಗಣೇಶ್ ಶೆಟ್ಟಿ ಮೂಡುಶೆಡ್ಡೆ (Ganesh shetty Modashedde), ರಾಘವ ನಂಬಿಯಾರ್, ಬಲಿಪ ಶೈಲಿ ಸಂಗ್ರಾಹಕ ನಿತ್ಯಾನಂದ ರಾವ್ ಸುರತ್ಕಲ್, ಪೆರುವಾಯಿ ನಾರಾಯಣ ಶೆಟ್ಟಿ, ಗಣರಾಜ ಕುಂಬ್ಳೆ, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ಭಾಸ್ಕರ ರೈ ಕುಕ್ಕುವಳ್ಳಿ (Bhaskara Rai Kukkuvalli) , ಸುಬ್ರಹ್ಮಣ್ಯ ಬೈಪಡಿತ್ತಾಯ (Subrahmanya Baipadittaya), ಭುಜಬಲಿ ಧರ್ಮಸ್ಥಳ, ಬೊಂಡಾಲ ಸಚ್ಚಿದಾನಂದ ಶೆಟ್ಟಿ, ರಾಜಾರಾಮ ಭಟ್ ಪೆರ್ಲ, ಡಾ.ಶ್ರೀಪತಿ ಭಟ್ ಕಜಂಪಾಡಿ, ಡಾ. ಸುಬ್ರಹ್ಮಣ್ಯ ಪದ್ಯಾಣ, ಡಾ. ವಿನಾಯಕ ಭಟ್ (Vinayak Bhat), ಮಹೇಶ ಮಣಿಯಾಣಿ, ಡಾ. ಪದ್ಮನಾಭ ಗೌಡ, ರಾಧಾಕೃಷ್ಣ ಕಲ್ಚಾರ್, ಆಟಿಕುಕ್ಕೆ ವೆಂಕಟೇಶ ಭಟ್ ಬೆಂಗಳೂರು, ಕಟೀಲು ಮೇಳಗಳ ಯಜಮಾನ ದೇವಿಪ್ರಸಾದ್ ಶೆಟ್ಟಿ, ಎಕ್ಸಲೆಂಟ್ ಕಾಲೇಜಿನ ಯುವರಾಜ್ ಜೈನ್ ,(Yuvraj Jain of Excellent College), ಶಾಂತರಾಮ ಕುಡ್ವ (Shantarama Kudwa), ನೆಲ್ಲಿಮಾರು ಸದಾಶಿವ ರಾವ್, ಮಹಾವೀರ ಪಾಂಡಿ, ದೇವಾನಂದ ಭಟ್ ಬೆಳುವಾಯಿ ಮತ್ತಿತರ ಗಣ್ಯರು ನುಡಿನಮನದಲ್ಲಿ ಭಾಗಿಯಾಗಿದ್ದರು. ಕಲಾವಿದ ಕೋಟೆ ರಾಮ ಭಟ್ (Artist Kote Rama Bhat) ಅವರು ಡಾ. ಪ್ರಭಾಕರ ಜೋಷಿ (Dr. Prabhakara Joshi) ಕಾರ್ಯಕ್ರಮ ನಿರೂಪಿಸಿದರು.