News Karnataka
Wednesday, June 07 2023
ಶ್ರದ್ಧಾಂಜಲಿ

ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಸಾವು

Man dies after falling from coconut tree
Photo Credit : News Karnataka

ಮೂಡುಬಿದಿರೆ: ತೆಂಗಿನಕಾಯಿಗಳನ್ನು (Coconut) ಕೀಳಲು ಮರಕ್ಕೆ ಹತ್ತಿದ ವ್ಯಕ್ತಿಯೊಬ್ಬರು ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ಮೂಡುಬಿದಿರೆ ತಾಲೂಕಿನ ಕೋಟೆಬಾಗಿಲಿನಲ್ಲಿ ಭಾನುವಾರ ನಡೆದಿದೆ.

ವಾಲ್ಪಾಡಿ ಗ್ರಾ.ಪಂ. (Valpady Grama Panchayat) ವ್ಯಾಪ್ತಿಯ ಅಳಿಯೂರು ಕಂಪೊಟ್ಟು (Aliyur Kampottu) ನಿವಾಸಿ ಸಂದೇಶ್ (44) ತೆಂಗಿನಮರದಿಂದ ಕೆಳಗೆ ಬಿದ್ದು ಸಾವನ್ನಪ್ಪಿದ ವ್ಯಕ್ತಿ.

ಇದನ್ನ ಓದಿ: ಇರುವೈಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅದ್ದೂರಿ ರಥೋತ್ಸವ

ಸಂದೇಶ್ (Sandesh) ಅವರು ಕೋಟೆಬಾಗಿಲು ವೀರಮಾರುತಿ ದೇವಸ್ಥಾನದ (Veeramaruti Temple) ಬಳಿಯ ಇಸಾಕ್ ಎಂಬವರ ಮನೆಗೆ ತೆಂಗಿನಕಾಯಿ ಕೀಳಲು ಬಂದಿದ್ದರು. ಯಂತ್ರವನ್ನು ಬಳಸಿ ತೆಂಗಿನ ಕಾಯಿಗಳನ್ನು ಕೀಳಲು ಮರವೇರಿದ್ದ ಅವರು ನಿಯಂತ್ರಣ ತಪ್ಪಿ ಕೆಳಗಡೆ ಇದ್ದ ಕಲ್ಲಿನ ಮೇಲೆ ಬಿದ್ದ ಪರಿಣಾಮವಾಗಿ ತಲೆಗೆ ಏಟಾಗಿದ್ದು ಅಲ್ಲಿಯೇ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಮೂಲತ: ಕೇರಳದ ಇಡಿಕಿಯವರಾಗಿರುವ ಸಂದೇಶ್ ಅವರಿಗೆ ಪತ್ನಿ ಇದ್ದಾರೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

News Karnataka

Read More Articles
MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *