ಮೂಡುಬಿದಿರೆ: ಹಾಲಿ ಶಾಸಕ, ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಅವರು ಮಂಗಳವಾರ ಆಡಳಿತ ಸೌಧದಲ್ಲಿ ನಾಮಪತ್ರ ಸಲ್ಲಿಸಿದರು.
ಮೂಡುಬಿದಿರೆ ವೆಂಕಟರಮಣ ದೇವಸ್ಥಾನ (Moodubidire Venkataramana Devastha), ಹನುಮಂತ ದೇವಸ್ಥಾನ (Hanuman temple) ಬಳಿಯಿಂದ ಮೆರವಣಿಗೆ ಮೂಲಕ ಸಾಗಿ ಬಂದು ಬಳಿಕ ನಾಮಪತ್ರ ಸಲ್ಲಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ (BJP State President Nalin Kumar) , ಜಿಲ್ಲಾಧ್ಯಕ್ಷ ಸುದರ್ಶನ್, ಮುಖಂಡರಾದ ಈಶ್ವರ ಕಟೀಲ್,ಕಸ್ತೂರಿ ಪೂಂಜ,ಸುನಿಲ್ ಆಳ್ವ,ಮೇಘನಾಥ ಶೆಟ್ಟಿ (Meghnath Shetty) ಮತ್ತಿತರರು ಭಾಗವಹಿಸಿದ್ದರು.
ಇದನ್ನ ಓದಿ: ಏ.16ರಂದು ಡಾ.ಎಲ್.ಸಿ ಸೋನ್ಸ್ ಕೃತಿ ಬಿಡುಗಡೆ
ಕ್ಷೇತ್ರದಾದ್ಯಂತ ಬಿಜೆಪಿ ಬೆಂಬಲಿಗರು ಭಾಗವಹಿಸಿದ್ದು ಬರುವವರಿಗೆ ಬಸ್ ಗಳ ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆಯಿಂದಲೇ ಪೇಟೆ ತುಂಬಾ ಜನ ಜಮಾಯಿಸಿದ್ದು ವಾಹನಗಳಿಗೆ ಪರ್ಯಾಯ ರಸ್ತೆ ಸಂಪರ್ಕ ಕಲ್ಪಿಸಲಾಯಿತು.