ಮೂಡುಬಿದಿರೆ: ಈಗಾಗಲೇ ಬಹುಬೇಡಿಕೆಯ ಯುಜಿಡಿ (UGD)ಕೆಲಸಕ್ಕೆ ಹಸಿರು ನಿಶಾನೆ ದೊರಕಿದೆ. ಎಫ್ ಎಸ್ ಡಿ ಪಿ (FSDP)ಮಾದರಿಯಲ್ಲಿ ಪ್ರಾಂತ್ಯ ಹಾಗೂ ಮಾರ್ಪಾಡಿ ಗ್ರಾಮಗಳ ಡ್ರೈನೇಜ್ ಸಮಸ್ಯೆಗಳಿಗೆ (Drainage problem) ಶೀಘ್ರ ಪರಿಹಾರ ಸಿಗಲಿದೆ. ಒಂದು ಎಕ್ಕರೆ ಪ್ರದೇಶದಲ್ಲಿ ಪ್ಲಾಂಟ್ ಸಿದ್ದಗೊಂಡು ಈ ಕಾರ್ಯ ನಡೆಯಲಿದೆ. ಒಂದು ವಾರಗಳೊಳಗಾಗಿ ಟೆಂಡರ್ ಕಾರ್ಯಗಳು ಮುಗಿಯಲಿದೆ ಸರ್ವಾಂಗೀಣ ರೀತಿಯಲ್ಲಿ ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವುದು ನನ್ನ ಗುರಿಯಾಗಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಕನ್ನಡ ಭವನದಲ್ಲಿ (Kannada Bhavan) ನಡೆದ ಮುಲ್ಕಿ ಮೂಡುಬಿದಿರೆ ಮಂಡಲದ ಪ್ರಣಾಳಿಕೆ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದನ್ನ ಓದಿ: ಮಾ.18ರಂದು ಸುಖಾನಂದ ಶೆಟ್ಟಿ, ಪ್ರಶಾಂತ್ ಪೂಜಾರಿ ಟ್ರೋಫಿ ಕಬಡ್ಡಿ ಪಂದ್ಯಾಟ
ಕೈಗಾರಿಕಾ ಪ್ರಾಂಗಣಕ್ಕಾಗಿ ನಲುವತ್ತು ಎಕ್ಕರೆ ಪ್ರದೇಶವನ್ನು ಗೊತ್ತುಪಡಿಸಲಾಗಿದ್ದು, ಸುಸಜ್ಜಿತ ಕೈಗಾರಿಕಾ ಪ್ರಾಂಗಣವೂ ನಿರ್ಮಾಣವಾಗಲಿದೆ. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಸಮಗ್ರ ಚಿಂತನೆ ನಡೆಸಲಾಗಿದೆ. ಸಭೆಯಲ್ಲಿ ವ್ಯಕ್ತವಾಗಿರುವ ಅಂಶಗಳನ್ನು ಪರಿಗಣಿಸಿ ಚುನಾವಣಾ ಪ್ರಣಾಳಿಕೆ ಸಿದ್ಧಪಡಿಸಲಾಗುತ್ತದೆ ಎಂದರು.
ಪ್ರಣಾಳಿಕೆ ಸಂಚಾಲಕ ಬಾಹುಬಲಿ ಪ್ರಸಾದ್ (The editor of the manifesto is Baahubali Prasad) , ಮಂಡಲ ಪ್ರಧಾನ ಕಾರ್ಯದರ್ಶಿ ಗೋಪಾಲ್ ಶೆಟ್ಟಿಗಾರ್, ಪ್ರಣಾಳಿಕೆ ಸಲಹಾ ಸಮಿತಿ ಸಂಚಾಲಕ ಪಿ.ಎಚ್ ವೇಣುಗೋಪಾಲ್ ಭಟ್, ಭೋಜರಾಜ ಶೆಟ್ಟಿ ಸೂರಿಂಜೆ ಉಪಸ್ಥಿತರಿದ್ದರು.