ಮೂಡುಬಿದಿರೆ: ಮೂಲ್ಕಿಗೆ ಮೋದಿ ಬಂದು ಕಳೆದ ಬಾರಿಕ್ಕಿಂತ 5019 ಮತ ಬಿಜೆಪಿಗೆ ಕಡಿಮೆ ಬಿದ್ದಿದೆ. ಡಬಲ್ ಇಂಜಿನ್ ಎರಡೂ ಸುಟ್ಟು ಹೋಗಿದೆ ಎಂದು ರಾಜ್ಯದ ಫಲಿತಾಂಶ ಸೂಚಿಸುತ್ತದೆ ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ (Former Minister K. Abhayachandra Jain) ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.
ಶಾಸಕ ಕೋಟ್ಯಾನ್ ಕ್ಷೇತ್ರದಲ್ಲಿ ವಾಸವಿರದೆ ಮಂಗಳೂರಿನಲ್ಲಿ ನೆಲೆಸಿದ್ದರೆ. ಆದರೆ ನಾನು ಕಾರ್ಯಕರ್ತನಾಗಿ ನಿರಂತರ ಕ್ಷೇತ್ರದಲ್ಲಿ ವಾಸಿಸುತ್ತಿದ್ದೇನೆ. ಜಿಲ್ಲೆಯಲ್ಲಿ ಪಕ್ಷ ಬಲ ಪಡಿಸಲು ಬಿ.ಕೆ ಹರಿಪ್ರಸಾದ್‌ರವರನ್ನು ಸಚಿವರಾಗಿ ಮಾಡಿ ಜಿಲ್ಲಾ ಉಸ್ತುವಾರಿ ನೀಡಬೇಕೆಂದು ಆಗ್ರಹಿಸಿದರು. ಅಭಿವೃದ್ಧಿ ಎನ್ನುವುದು ಅವರ ಅವರ ಹಿತಕ್ಕಾಗಿ ನಡೆಯಬಾರದು ಕ್ಷೇತ್ರದ ಅಭಿವೃದ್ಧಿ ಎಲ್ಲ ಜನತೆಗೆ ಅನುಕೂಲವಾಗಿದ್ದರೆ ನಾನು ಕೂಡ ಶಾಸಕರನ್ನು ಬಿಂಬಲಿಸುತ್ತೇನೆ ಎಂದು ಹೇಳಿದರು.
ಇದನ್ನ ಓದಿ: ರಾಜ್ಯದಲ್ಲಿ ಬಿಜೆಪಿಗೆ ಹಿನ್ನಡೆಯಾದ ನೋವಿದೆ: ಉಮಾನಾಥ ಕೋಟ್ಯಾನ್
ಕಾಂಗ್ರೆಸ್ ಪಕ್ಷದ ವೈಫಲ್ಯವನ್ನು (Failure of Congress party) ಒಪ್ಪಿಗೊಳ್ಳುತ್ತೇನೆ. ಕರಾವಳಿಯಲ್ಲಿ ಹಿಂದುತ್ವ ಅಲೆ ಇದೆ. ಈ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಬಡವರಿಗೆ ಅತಿ ಹೆಚ್ಚಿನ ಲಾಭ ಮಾಡಿಕೊಟ್ಟಿದೆ. ಕಾಂಗ್ರೆಸ್ ಮಾಡಿದ ಎಲ್ಲಾ ಅಭಿವೃದ್ಧಿ ಯೋಚನೆಗಳು ಹಿಂದುತ್ವ ಮತ್ತು ಬಿಜೆಪಿಯ ದೇವರು ತೋರಿಸುವ ತಂತ್ರಗಾರಿಕೆಯಿAದ ಮತಗಳಿಸುವಲ್ಲಿ ಹಿನ್ನಡೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು.