ಮೂಡುಬಿದಿರೆ: ಕರ್ನಾಟಕ ರಾಷ್ಟ್ರಸಮಿತಿ ಪಕ್ಷ (Karnataka Rashtra Samiti Party) ಮೂಲ್ಕಿ-ಮೂಡುಬಿದಿರೆ ವಿಧಾನ ಸಭಾ ಪರಿಷತ್ ಕ್ಷೇತ್ರದ ಅಭ್ಯರ್ಥಿಯಾಗಿ (Candidate for Mulki-Moodbidire Vidhan Parishad Constituency) ಪುತ್ತಿಗೆ ಗ್ರಾಮದ ಚಾಲಕ ದಯಾನಂದ್ ಆಯ್ಕೆಯಾಗಿದ್ದಾರೆ.
ಕೆಎಸ್‌ಆರ್ ಪಕ್ಷದ (KSR Party) ಪ್ರಣಾಳಿಕೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಯಾನಂದ್, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಯೋಜನೆ ರೂಪಿಸುವ, ಅನುಷ್ಠಾನಕ್ಕೆ ತರುವ ಕುರಿತು ರಾಜ್ಯದ ಜನಸಾಮಾನ್ಯರ, ಚಿಂತಕರ, ತಜ್ಞರ ಜೊತೆಗಳಲ್ಲಿ ಹಲವು ಸಭೆಗಳನ್ನು ನಡೆಸಿ ಪ್ರಣಾಳಿಕೆ ಸಿದ್ಧಪಡಿಸಲಾಗಿದೆ. ಭ್ರಷ್ಟಾಚಾರ ರಹಿತ, ಪಾರದರ್ಶಕ, ಜವಾಬ್ದಾರಿಯುತ ಆಡಳಿತಕ್ಕಾಗಿ ಲೋಕಾಯುಕ್ತವನ್ನು ಬಲಪಡಿಸುವುದು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆರ್ಥಿಕತೆ ನಿರ್ಮಾಣ, ಉದ್ಯೋಗಸೃಷ್ಟಿ, ಗ್ರಾಮ ಸ್ವರಾಜ್ಯ (Village Swarajya), ಬಡತನ ನಿವಾರಣೆಗಾಗಿ ಮದ್ಯ ನಿಷೇಧ. ಉಚಿತ ಗುಣಮಟ್ಟದ ಶಿಕ್ಷಣ (Free quality education), ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ, ಪೊಲೀಸ್ ವ್ಯವಸ್ಥೆಯಲ್ಲಿ ಬದಲಾವಣೆ, ಪ್ರತಿಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ(Establishment of Medical College), ವೈಜ್ಞಾನಿಕ ಬೆಳೆ ಮತ್ತು ಬೆಲೆ ಪದ್ಧತಿ ಜಾರಿ ಸಹಿತ ವಿವಿಧ ಅಂಶಗಳನ್ನು ಅಭಿವೃದ್ಧಿಯ ಅಜೆಂಡಾವನ್ನು ಮುಂದಿಟ್ಟುಗೊಂಡು ರಾಜ್ಯದ 224 ಕ್ಷೇತ್ರಗಳಲ್ಲೂ (224 field) ಕೆಆರ್‌ಎಸ್ ಅಭ್ಯರ್ಥಿಗಳು (KRS candidates) ಸ್ಪರ್ಧಿಸುತ್ತಿದ್ದೇವೆ. ಚುನಾವಣೆಗೆ ಎದುರಿಸಲು ಬೇಕಾದ ಆರ್ಥಿಕ ನೆರವನ್ನು ಸಾರ್ವಜನಿಕರಿಂದ ದೇಣಿಗೆ ರೂಪದಲ್ಲಿ ಸ್ವೀಕರಿಸುತ್ತೇವೆ. ಕ್ಷೇತ್ರದ ಪ್ರತಿ ಗ್ರಾಮಗಳಿಂದಲೂ ಜನರು ಕೆಎಸ್‌ಆರ್‌ಗೆ ಸೇರುತ್ತಿದ್ದಾರೆ ಎಂದು ತಿಳಿಸಿದರು.
ಇದನ್ನ ಓದಿ: ದಿನ ಬಳಕೆ ವಸ್ತುಗಳ ಬೆಲೆ ಏರಿಕೆ: ಮಹಿಳಾ ಕಾಂಗ್ರೆಸ್ ನಿಂದ ಪ್ರತಿಭಟನೆ
ಪಕ್ಷದ ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ಪ್ರಕಾಶ್ (Beltangadi Taluk Unit President Prakash), ಸದಸ್ಯರಾದ ಯಶೋಧಾ, ಸುನೀತಾ ಸುದ್ದಿಗೋಷ್ಠಿಯಲ್ಲಿದ್ದರು.