ಮೂಡಬಿದಿರೆ: ಮತದಾನ ಮಾಡುವುದು ನಮ್ಮ ನಾಗರಿಕರ ಆದ್ಯ ಜವಾಬ್ದಾರಿ. ಇದು ನಮ್ಮ ರಾಷ್ಟ್ರದ ಮೂಲಭೂತ ಹಕ್ಕುಗಳಲ್ಲಿ ಒಂದಾಗಿದೆ. ಚುನಾವಣೆ ಪ್ರಜಾಪ್ರಭುತ್ವದ ಬಹುದೊಡ್ಡ ಹಬ್ಬವಾಗಿದೆ (Elections are the biggest festival of democracy). ಕಡ್ಡಾಯ ಮತದಾನ ಮತ್ತು ನೈತಿಕ ಮತದಾನಕ್ಕೆ ಒತ್ತು ನೀಡಬೇಕಾಗಿದೆ ಎಂದು ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಕುಮಾರ ಹೇಳಿದರು. ಅವರು ಮೂಡಬಿದ್ರೆ ಅಳ್ವಾಸ್ ಕಾಲೇಜು ನಲ್ಲಿ ನಡೆದ ಮತದಾರ ಜಾಗೃತಿ ಮತ್ತು ಅರಿವು ಕಾರ್ಯಕ್ರಮದಲ್ಲಿ (Voter awareness and awareness programme) ಮಾತನಾಡಿದರು.
ಇದನ್ನ ಓದಿ: ಮೂಡುಬಿದಿರೆ ಚುನಾವಣೆಗೆ ಪೂರ್ಣ ಸಿದ್ಧತೆ
18 ವರ್ಷ ವಯಸ್ಸಿನ ಮೇಲ್ಪಟ್ಟ ಎಲ್ಲರೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಮತದಾನದ ದಿನವಾದ ಮೇ 10 ರಂದು ತಪ್ಪದೇ ಮತ ಚಲಾಯಿಸಬೇಕು. ಯಾವುದೇ ಕಾರಣಕ್ಕೂ ಮತದಾನದಿಂದ ದೂರ ಉಳಿಯಬಾರದು. ದೇಶದ ಉಜ್ವಲ ಭವಿಷ್ಯಕ್ಕಾಗಿ ಎಲ್ಲರೂ ತಪ್ಪದೇ ಮತದಾನ ಮಾಡಬೇಕು ಎಂದು ಹೇಳಿದರು.
ಈ ವೇಳೆ ಗಿರೀಶ್ ನಾವಡ (Girish Navada) ಬಳಗದಿಂದ ಮತದಾನದ ಜವಾಬ್ದಾರಿಯ ಅರಿವು ಮೂಡಿಸುವ ಯಕ್ಷಗಾನ ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿ ಅಳ್ವಾಸ್ ಟ್ರಸ್ಟಿ ವಿವೇಕ್ ಅಳ್ವಾ (Alvas Trustee Vivek Alva), ಸ್ವೀಪ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು.