ಮೂಡುಬಿದಿರೆ: ಮಾಜಿ ಸಚಿವ ಕೆ.ಅಭಯಚಂದ್ರ ಅವರಿಗೆ ಭೂಗತ ಲೋಕದವರೆಂದು ಹೇಳಿಕೊಂಡ ವ್ಯಕ್ತಿಗಳು ಜೀವಬೆದರಿಕೆಯೊಡ್ಡಿರುವ ಬಗ್ಗೆ ಅಭಯಚಂದ್ರ ಅವರು ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಭಾರೀ ಕೆಲಸ ಮಾಡುತ್ತೀಯಾ, ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ (Congress candidate Mithun Rai) ಪರ ಭಾರೀ ಪ್ರಚಾರ ಮಾಡ್ತೀಯಾ, ನಿನ್ನನ್ನು ಸುಮ್ಮನೆ ಬಿಡೋದಿಲ್ಲ ಎಂದು ಜೀವಬೆದರಿಕೆಯೊಡ್ಡಿದ್ದಾರೆನ್ನಲಾಗಿದೆ.
ಈ ಹಿಂದೆ ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣ (Prashant Pujari murder case) ನಡೆದಾಗ ಅಭಯರಿಗೆ ಭೂಗತ ವ್ಯಕ್ತಿಗಳಿಂದ ಜೀವ ಬೆದರಿಕೆಯೊಡ್ಡಿದ್ದ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಅಭಯರಿಗೆ ಕೆಲಕಾಲ ಭದ್ರತೆ ಒದಗಿಸಲಾಗಿತ್ತು.
ಇದನ್ನ ಓದಿ: ಜೆಡಿಎಸ್ ಅಭ್ಯರ್ಥಿ ಅಮರಶ್ರೀ ನಾಮಪತ್ರ ಸಲ್ಲಿಕೆ
ಇದೀಗ ಚುನಾವಣೆ ಸಂದರ್ಭದಲ್ಲಿ ಹಿರಿಯರೂ, ಮಾಜಿ ಸಚಿವರೂ ಆಗಿರುವ ಅಭಯರಿಗೆ ಮತ್ತೆ ಜೀವ ಬೆದರಿಕೆಯೊಡ್ಡಲಾಗಿದ್ದು “ಇಂತಹ ಬೆದರಿಕೆಗಳಿಗೆಲ್ಲಾ ಅಭಯ ಚಂದ್ರ ಬಗ್ಗುವವನಲ್ಲ, ನನ್ನ ಸಾವನ್ನು ದೇವರು ನಿರ್ಧರಿ ಸಿರುತ್ತಾನೆ, ಇಂತಹ ಚಿಲ್ಲರೆಗಳ ಬೆದಿಕೆಗಳಿಗೆ ತಲೆಕೆಡಿಸಿ ಕೊಳ್ಳುವವನಲ್ಲ” ಎಂದವರು ಪ್ರತಿಕ್ರೀಯಿಸಿದ್ದಾರೆ.