ಮೂಡುಬಿದಿರೆ: ಮೂಡುಬಿದಿರೆ ಶಾಂತಿ ಸಹಬಾಳ್ವೆಗೆ ಹೆಸರಾದ ಊರಾಗಿದ್ದು ಈಗ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು (Congress leaders) ಬಿಜೆಪಿಯ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಅವರ ಬಗ್ಗೆ ಇಲ್ಲಸಲ್ಲದ ಸುಳ್ಳು ಪ್ರಚಾರ ನಡೆಸಿ ಮುದಾಯಗಳ ನಡುವೆ ಒಡಕು ಸೃಷ್ಠಿಸುವ ಕೆಲಸ ಮಾಡುತ್ತಿದ್ದು ಇದಕ್ಕೆ ವಿವಿಧ ಸಮುದಾಯಗಳ ಮುಖಂಡರು ಜಂಟಿ ಸುದ್ದಿಗೋಷ್ಠಿಯಲ್ಲಿ ಆಕ್ಷೇಪವೆತ್ತಿದ್ದಾರೆ.
ಹುನುಮಂತ, ವೆಂಕಟರಮಣ ದೇವಳಗಳ ಆಡಳಿತ ಮೊಕ್ತೇಸರ ಜಿ ಉಮೇಶ್ ಪೈ (Administration Moktesara G Umesh Pai) ಮಾತನಾಡಿ, ಶಾಸಕರಾಗಿದ್ದ ಉಮಾನಾಥ ಕೋಟ್ಯಾನ್ ಎಲ್ಲಾ ಸಮುದಾಯಗಳಿಗೂ ಸಮಾನ ಆದ್ಯತೆ ನೀಡಿದ್ದು ಊರಿನ ಪ್ರಗತಿಗಾಗಿ ದೊಡ್ಡ ಕೊಡುಗೆ ನೀಡಿದ್ದಾರೆ. ಜಾತಿಮತ ಬೇಧವಿಲ್ಲದೆ ಸ್ಪಂದಿಸಿದ್ದಾರೆ. ಈಗ ಅವರ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸಿ ಮತದಾರರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಯಾರೂ ಕಿವಿಗೊಡದೆ ಆತ್ಮಸಾಕ್ಷಿಯಾಗಿ ಮತಚಲಾಯಿಸಬೇಕು ಎಂದರು.
ಉದ್ಯಮಿ, ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಕೆ. ಶ್ರೀಪತಿ ಭಟ್ ಮಾತನಾಡಿ, ಚುನಾವಣೆಯ ನೆಪದಲ್ಲಿ ಸಮುದಾಯಗಳ ನಡುವೆ ಬಿರುಕು ಮೂಡಿಸಲು ಯಾರೂ ಪ್ರಯತ್ನಿಸಬಾರದು. ಈ ಬಗ್ಗೆ ಮತದಾರರೂ ಜಾಗೃತರಾಗಬೇಕು. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದರು. ಆನೆಗುಂದಿ ಸಂಸ್ಥಾನ (State of Anegundi) ಸರಸ್ವತಿ ಪೀಠದ ಕೋಶಾಧಿಕಾರಿ ಅರವಿಂದ ವೈ ಆಚಾರ್ಯ ಮಾತನಾಡಿ, ಹಿಂದುಳಿದ ಸಮುದಾಯಗಳ ಸಭಾಭವನ (Backward Communities Hall), ದೇವಳಗಳ ಜೀರ್ಣೋದ್ದಾರಕ್ಕಾಗಿ ಉಮಾನಾಥ ಕೋಟ್ಯಾನ್ ಅನುದಾನ ಒದಗಿಸಿಕೊಟ್ಟಿದ್ದಾರೆ. ಯಾವುದೇ ಸಮುದಾಯದವರನ್ನು ಕಡೆಗಣಿಸಿಲ್ಲ. ಹಿಂದುತ್ವ ಮತ್ತು ರಾಷ್ಟ್ರೀಯತೆಗೆ ಒತ್ತು ನೀಡುವ ಸಮುದಾಯಗಳನ್ನು ಗುರುತಿಸಿ ಅವರ ನಡುವೆ ಒಡಕು ಸೃಷ್ಠಿಸುವ ಪ್ರಯತ್ನ ನಡೆಯುತ್ತಿದೆ ಎಂದರು.
ಇದನ್ನ ಓದಿ: ಎಕ್ಸಲೆಂಟ್ ಮೂಡುಬಿದಿರೆ ಸಾಧನೆ; 130 ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್ ಗೆ ಅರ್ಹತೆ
ಗುರುಮಠ ಕಾಳಿಕಾಂಬಾ ದೇವಸ್ಥಾನದ (Guru Math Kalikamba Temple) ಮೊಕ್ತೇಸರ ಬಾಲಕೃಷ್ಣ ಆಚಾರ್ಯ, ಸೇವಾ ಸಮಿತಿಯ ಅಧ್ಯಕ್ಷ ಹರಿಶ್ಚಂದ್ರ ಆಚಾರ್ಯ, ವೆಂಕಟರಮಣ, ಹನುಮಂತ ದೇವಳಗಳ ಟ್ರಸ್ಟಿ ಶಾಂತಾರಾಮ ಕುಡ್ವ (Shantarama Kudwa trustee of the Hanuman temples), ಹಿರಿಯ ಉದ್ಯಮಿ ಆರ್.ಕೆ. ಭಟ್ ಮತ್ತಿತರರು ಉಪಸ್ಥಿತರಿದ್ದರು. ಬೆಳುವಾಯಿ ಭಾಸ್ಕರ ಆಚಾರ್ಯ ನಿರ್ವಹಸಿದರು.