ಮೂಡುಬಿದಿರೆ: ಬಿಜೆಪಿಯ ಸಿದ್ದಾಂತವನ್ನು ವಿರೋಧಿಸುವ ಕಾಂಗ್ರೆಸ್ ಅಧಿಕಾರದ ವ್ಯಾಮೋಹದಿಂದ ಬಿಜೆಪಿಯನ್ನೇ ಬೆಂಬಲಿಸುತ್ತಿದೆ.ಹಾಗಾಗಿ ಬಿಜೆಪಿಗೆ ಓಟು ಹಾಕಬೇಕೆಂದಿಲ್ಲ, ಕಾಂಗ್ರೆಸ್ ಗೆ ಹಾಕಿದರೂ ಅದು ಅಟೊಮೇಟಿಕ್ ಆಗಿ ಬಿಜೆಪಿಗೆ ವರ್ಗಾವಣೆಯಾಗುತ್ತದೆ ಆಗುತ್ತದೆ ಎಂದು ಎಸ್.ಡಿ.ಪಿ.ಐ. (SDPI) ರಾಜ್ಯ ಮುಖಂಡರು, ನ್ಯಾಯವಾದಿ ಹರಿರಾಂ ಅವರು ಹೇಳಿದರು.
ಅವರು ಮೂಡುಬಿದಿರೆಯಲ್ಲಿ ನಡೆದ ಎಸ್.ಡಿ.ಪಿ.ಐ ಕಚೇರಿ ಉದ್ಘಾಟನೆ ಹಾಗೂ ಸ್ವರಾಜ್ಯ ಮೈದಾನದಲ್ಲಿ (Swaraj Maidan) ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಇದನ್ನ ಓದಿ: ಫೆ.19ರಂದು ಎಸ್‌ಡಿಪಿಐ ಕಚೇರಿ ಉದ್ಘಾಟನೆ; ಸಾರ್ವಜನಿಕ ಸಭೆ
ಉತ್ತರ ಕರ್ನಾಟಕದಲ್ಲಿ (North Karnataka) ಕಾಂಗ್ರೆಸ್ ನಿಂದ ಎಲ್ಲವನ್ನೂ ಪಡೆದ ಕಾಂಗ್ರೆಸ್‌ನ (Congress) ಕೆಲವರು ಕೊನೆಗೆ ಎಡಕಾಲಲ್ಲಿ ಒದ್ದು ಬಿಜೆಪಿಗೆ ಹೋಗಿದ್ದಾರೆ, ಆದರೆ ಕಳೆದ ಎಪ್ಪತ್ತು ವರ್ಷಗಳಿಂದ ನಮ್ಮ ಪಕ್ಷ ಎಂದು ನೇತಾಡುತ್ತಾ ಬಂದಿರುವ ದಲಿತ, ಮುಸ್ಲಿಂ, ಕ್ರೈಸ್ತರಿಗೆ ಕಾಂಗ್ರೆಸ್ ಕೊಡುಗೆ ಏನು ಎಂದು ಪ್ರಶ್ನಿಸಿದ ಅವರು ಕಾಂಗ್ರೆಸ್ ಮತ್ತು ಬಿಜೆಪಿ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮಾರಾಟಕ್ಕಿಟ್ಟಿದ್ದಾರೆ. ಪ್ರಜಾಪ್ರಭುತ್ವ ಉಳಿಯಬೇಕಾದರೆ ಈ ದೇಶದಲ್ಲಿ ಪರ್ಯಾಯ ಶಕ್ತಿಯೊಂದರ ಅವಶ್ಯಕತೆಯಿದ್ದು ಎಸ್.ಡಿ.ಪಿ.ಐ ಮುಂದಿನ ದಿನಗಳಲ್ಲಿ ಆ ಪರ್ಯಾಯಸರ್ಕಾರ ಶಕ್ತಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.