ಮೂಡುಬಿದಿರೆ: ವಿಧಾನ ಸಭಾ ಚುನಾವಣೆಯಲ್ಲಿ ಮೂಡುಬಿದಿರೆ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಡಾ.ಅಮರಶ್ರೀ ಅಮರನಾಥ ಶೆಟ್ಟಿ (Dr. Amarashree Amarnath Shetty) ಸ್ಪರ್ಧಿಸಲಿದ್ದು ಮೂಡುಬಿದಿರೆ ತಾಲೂಕು ಆಡಳಿತ ಸೌಧದಲ್ಲಿ (Moodbidire Taluk Administration Building) ನಾಮಪತ್ರ ಸಲ್ಲಿಸಿದ್ದಾರೆ. ತಾಯಿ ಜಯಶ್ರೀ ಅಮರನಾಥ ಶೆಟ್ಟಿ, ಪಕ್ಷದ ಹಿರಿಯ ಕಾರ್ಯಕರ್ತ ಹರಿಪ್ರಸಾದ್ ಹಾಗೂ ಬೆಂಬಲಿಗರೊAದಿಗೆ ಪಂಚರತ್ನ ಮುಂಭಾಗದಲ್ಲಿರುವ ಅಮರನಾಥ ಶೆಟ್ಟಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮೆರವಣಿಗೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದರು.
ಸ್ಪಷ್ಟ ಗುರಿ, ನಿಶ್ಚಿತ ಯೋಜನೆಯೊಂದಿಗೆ ಈಗಾಗಲೇ ಮತದಾರರ ಮನೆ ಮನೆಗೆ ತೆರಳಿ, ಅಹವಾಲು ಆಲಿಸಿ, ಜನಸಂಪರ್ಕ (Public relations) ನಡೆಸುತ್ತಿರುವ ಅಮರಶ್ರೀಯವರು, ಬದಲಾವಣೆಯನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದೇನೆ. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಯೋಜನೆ ರೂಪಿಸುತ್ತಿದ್ದೇನೆ. ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ಉದ್ಯೋಗ , ಮಹಿಳಾ ಸಬಲೀಕರಣ (Women empowerment), ಆರೋಗ್ಯ, ಪ್ರವಾಸ ಹಲವು ವಿಚಾರಗಳನ್ನು ತಮ್ಮ ಚುನಾವಣಾ ಪ್ರಚಾರದಲ್ಲಿ ಜನತೆಗೆ ತಿಳಿಸುತ್ತಾ ಬಂದಿದ್ದು, ಜನಪರವಾದ ಕೆಲಸ (Popular Social Works) ಕಾರ್ಯಗಳನ್ನು ಮಾಡುವ ನಿಟ್ಟಿನಲ್ಲಿ ಮುಂದುವರಿಯುವುದಾಗಿ ನಾಮಪತ್ರ ಸಲ್ಲಿಕೆಯ ನಂತರ ಮಾಧ್ಯಮದೊಂದಿಗೆ (To Media) ಮಾತನಾಡುತ್ತಾ ಅಭಿಪ್ರಾಯ ಹೇಳಿದ್ದಾರೆ.
ಇದನ್ನ ಓದಿ: ಜೆಡಿಎಸ್ ತೆನೆಹೊತ್ತ `ಮಹಿಳೆ’ ಮಾಜಿ ಸಚಿವರ ಪುತ್ರಿ ಜೆಡಿಎಸ್ ಅಭ್ಯರ್ಥಿ