ಮೂಡುಬಿದಿರೆ: ಭಾರತೀಯ ಜನತಾ ಪಾರ್ಟಿ ಮುಲ್ಕಿ (Bharatiya Janata Party Mulki) ಮೂಡುಬಿದಿರೆ ಮಂಡಲ ವತಿಯಿಂದ ಮೂಡುಬಿದಿರೆ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ (Scouts Guides Kannada Bhavan) ಮಂಗಳವಾರ ಜನಸೇವಕ ಸಮಾವೇಶ ನಡೆಯಿತು.
ಶಾಸಕ ಉಮಾನಾಥ್ ಕೋಟ್ಯಾನ್ (MLA Umanath Kotyan) ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಜನಪ್ರತಿನಿಧಿಗಳೆಂದರೆ ಜನರ ಸೇವಕರು. ಕ್ಷೇತ್ರದ ಹಾಗೂ ತಮ್ಮ ವಾರ್ಡುಗಳ ಸಮಸ್ಯೆಗಳನ್ನು, ಜನರಿಗೆ ಸರಕಾರದ ಸೌಲಭ್ಯಗಳ ವ್ಯವಸ್ಥೆಯ ಬಗ್ಗೆ ಮಾಹಿತಿಗಳನ್ನು ನೀಡಲು ನಮ್ಮನ್ನು ಆಯ್ಕೆ ಮಾಡಿದ್ದಾರೆ ಆದ್ದರಿಂದ ನಾನು ಮತ್ತು ಗ್ರಾ.ಪಂ, ತಾ.ಪಂ., ಜಿ.ಪಂ. ಸದಸ್ಯರು ಜನರ ಕೊಂಡಿಯಾಗಿ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಹೋಗಬೇಕಾದ ಅನಿವಾರ್ಯತೆಯಿದೆ ಎಂದರು.
ಇದನ್ನ ಓದಿ: ಜೈನ್ ಮೆಡಿಕಲ್ ಸೆಂಟರ್ ಆಸ್ಪತ್ರೆಯಲ್ಲಿ ಉಚಿತ ಶ್ರವಣ ಪರೀಕ್ಷೆ ಶಿಬಿರ
ಈ ಸಂದರ್ಭದಲ್ಲಿ ವಿಧಾನಪರಿಷತ್ (Legislature) ಸದಸ್ಯರು ಪ್ರತಾಪಸಿಂಹ ನಾಯಕ್, ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸುದರ್ಶನ ಮೂಡುಬಿದಿರೆ, ಮಂಡಲಾಧ್ಯಕ್ಷರಾದ ಸುನೀಲ್ ಅಳ್ವ, ಮಂಡಲ ಚುನಾವಣಾ ಪ್ರಭಾರಿ ರೇಶ್ಮಾ ಉದಯ್ ಶೆಟ್ಟಿ (Mandal Election Officer Reshma Uday Shetty), ದ.ಕ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಈಶ್ವರ್ ಕಟೀಲ್ , ಮಂಡಲ ಪ್ರಧಾನಕಾರ್ಯದರ್ಶಿಗಳಾದ ಗೋಪಾಲ್ ಶೆಟ್ಟಿಗಾರ್, ಕೇಶವ ಕರ್ಕೇರಾ, ಪುರಸಭೆ ಹಾಗೂ ಗ್ರಾಮಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರು ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.