ಮೂಡುಬಿದಿರೆ: ತನ್ನ ಶಿಷ್ಯ ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ (Congress candidate Mithun Rai) ಪರವಾಗಿ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ (Former Minister K.Abhay Chandra Jain) ಅವರು ಗುರುವಾರ ಪುರಸಭಾ ವ್ಯಾಪ್ತಿಯ ವಾಡ್೯ ನಂಬ್ರ 15ರ (Ward No.15) ಕೊಡಂಗಲ್ಲು ಪರಿಸರದ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು.
ಇದನ್ನ ಓದಿ: ವಿಶ್ವ ವಿದ್ಯಾನಿಲಯ ಕಾಲೇಜಿನಲ್ಲಿ ವಿಶ್ವ ಆರೋಗ್ಯ ದಿನಾಚರಣೆ
ಚುನಾವಣೆ ಪ್ರಣಾಳಿಕೆಯ 300 ಗ್ಯಾರಂಟಿ ಕಾಡ್೯ನ್ನು (300 guarantee code) ಹಸ್ತಾಂತರಿಸಿದ ಅಭಯಚಂದ್ರ ಅವರು ಮಿಥುನ್ ರೈಯನ್ನು ಮರೆಯದಿರಿ ಎಂದರು. ವಾಡ್೯ ಸದಸ್ಯೆ ರೂಪಾ ಸಂತೋಷ್ ಶೆಟ್ಟಿ (Roopa Santhosh Shetty is a member of Ward9), ಪುರಸಭಾ ಸದಸ್ಯರಾದ ಸುರೇಶ್ ಕೋಟ್ಯಾನ್, ಕೊರಗಪ್ಪ, ಸುರೇಶ್ ಪ್ರಭು, ಜೊಸ್ಸಿ ಮಿನೇಜಸ್, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸುಪ್ರಿಯಾ ಡಿ.ಶೆಟ್ಟಿ ಮತ್ತಿತರರು ಮತ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.