ಮೂಡುಬಿದಿರೆ: ಪುರಸಭೆಯು 2023-24 ನೇ ಸಾಲಿನಲ್ಲಿ 30.31ಕೋಟಿ ಆದಾಯ (30.31 crore income) ಮತ್ತು 30.10 ಕೋಟಿ ಖರ್ಚಿನೊಂದಿಗೆ (30.10 crore expenditure) 31.07 ಲಕ್ಷದ ಮಿಗತೆ ಬಜೆಟ್‌ನ್ನು (31.07 lakh surplus budget) ಮಂಡಿಸಿದೆ.
ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ (Municipal President Prasad Kumar) ಬುಧವಾರ ನಡೆದ ವಿಶೇಷ ಸಭೆಯಲ್ಲಿ ಆಯವ್ಯಯದ ಬಜೆಟ್‌ನ್ನು ಮಂಡಿಸಿದರು. ಬಜೆಟ್‌ನ ಆದಾಯದಲ್ಲಿ ಆಸ್ತಿ ತೆರಿಗೆ 2.77 ಕೋಟಿ, ನೀರಿನ ಶುಲ್ಕ 1.05 ಕೋಟಿ, ಎಸ್‌ಎಫ್‌ಸಿ ವೇತನ ಅನುದಾನ 1 ಕೋಟಿ (SFC Salary Grant 1 Cr), ಎಸ್‌ಎಫ್‌ಸಿ ವಿದ್ಯುತ್ ಅನುದಾನ 3.25 ಕೋಟಿ (3.25 crores of SFC electricity grant) , ಎಸ್‌ಎಫ್‌ಸಿ ವಿಶೇಷ ಅನುದಾನ 1 ಕೋಟಿ, 15 ನೇ ಹಣಕಾಸಿನ ಸಾಮಾನ್ಯ ಮೂಲ ಅನುದಾನ 2 ಕೋಟಿ, ವಾಣಿಜ್ಯ ಮಳಿಗೆಗಳ ಬಾಡಿಗೆ 80 ಲಕ್ಷ, ಕಟ್ಟಡ ಪರವಾನಗಿ ಮತ್ತು ನವೀಕರಣ 50 ಲಕ್ಷ, ಕಟ್ಟಡ ಅಭಿವೃದ್ಧಿ ಶುಲ್ಕ 30 ಲಕ್ಷ, ಮಾರ್ಕೆಟ್ ವರಿ ವಸೂಲಿ 75 ಲಕ್ಷ, ವ್ಯಾಪಾರ ಪರವಾನಗಿ 16 ಲಕ್ಷ. ಮನೆಮನೆ ಕಸ ಸಂಗ್ರಹ ಶುಲ್ಕ 50 ಲಕ್ಷ, ಖಾತಾ ಬದಲಾವಣೆ 50ಲಕ್ಷ, ಎಸ್ ಎಫ್ ಸಿ ಮುಕ್ತ ನಿಧಿ 75 ಲಕ್ಷ (SFC Open Fund 75 Lakhs) , ಸ್ವಚ್ಛ ಭಾರತ್ ಮಿಷನ್ ಅನುದಾನ 25 ಲಕ್ಷ (Swachh Bharat Mission grant 25 lakhs), ಅಮೃತ ನಿರ್ಮಲ ನಗರ ಯೋಜನೆ 50 ಲಕ್ಷ (Amrita Nirmala Nagar Yojana 50 lakhs), ಶಾಸಕರ ಪ್ರದೇಶಾಭಿವೃದ್ಧಿ ಯೋಜನೆ 15 ಲಕ್ಷ, ಇತರ ಅನುದಾನಗಳು 30 ಲಕ್ಷ ಹಾಗೂ ಇತರ ಆದಾಯಗಳು ಒಳಗೊಂಡಿದೆ.
ಇದನ್ನ ಓದಿ: ಪುತ್ತಿಗೆ ಗ್ರಾಮಸಭೆ; ಸಿಬ್ಬಂದಿಗಳ ಕೊರತೆಯ ಪ್ರಸ್ತಾಪ
ಬಜೆಟ್‌ನ ಖರ್ಚಿನಲ್ಲಿ ವೇತನಗಳು, ಭತ್ಯೆಗಳು, 1.31 ಕೋಟಿ, ಬೀದಿ ದೀಪ ವಿದ್ಯುತ್ ದೀಪ ವೆಚ್ಚಗಳು (1.31 crore, street lighting and electric lighting expenses) 1.25 ಕೋಟಿ, ಪೌರಕಾರ್ಮಿಕರ ವೇತನ 1 ಕೋಟಿ, ನೀರು ಸರಬರಾಜು ವಿದ್ಯುತ್ ವೆಚ್ಚ2 ಕೋಟಿ, ರಸ್ತೆಗಳು, ಕಲ್ಲುಹಾಸು, ಮತ್ತು ಪಾದಾಚಾರಿ ಮಾರ್ಗಗಳ ರಚನೆ 2.50 ಕೋಟಿ, ಬೀದಿದೀಪ, ಸಂಚಾರಿ ದೀಪ (traffic light), ಕಂಬಗಳ ಅಳವಡಿಕೆ 1 ಕೋಟಿ, ಬಾಕ್ಸ್ ಚರಂಡಿ ನಿರ್ಮಾಣ 1 ಕೋಟಿ, (1 crore for construction of box drains,) ಕಟ್ಟಡ ದುರಸ್ಥಿ ಮತ್ತು ನಿರ್ವಹಣೆ 15 ಲಕ್ಷ, ಕಟ್ಟಡಗಳ ವಿದ್ಯುತ್ ವೆಚ್ಚಗಳು 20 ಲಕ್ಷ, ರಸ್ತೆ ಮತ್ತು ಚರಂಡಿ ದುರಸ್ಥಿ ಮತ್ತು ನಿರ್ವಹಣೆ 60 ಲಕ್ಷ, ಬೀದಿದೀಪ ನಿರ್ವಹಣೆ 30 ಲಕ್ಷ ಹಾಗೂ ಇತರ ವೆಚ್ಚಗಳು ಸೇರಿದೆ. ಉಪಾಧ್ಯಕ್ಷೆ ಸುಜಾತ ಶಶಿಧರ್, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ,ಪರಿಸರ ಇಂಜಿನಿಯರ್ ಶಿಲ್ಪಾ, ಲೆಕ್ಕಾಧಿಕಾರಿ ಸೀಮಾ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.