ಮೂಡುಬಿದಿರೆ: ಕಳೆದ ಏಳು ವರ್ಷಗಳಿಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ವಲೇರಿಯನ್ ಸಿಕ್ವೇರಾ (Valerian Sequeira) ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಇದನ್ನ ಓದಿ: ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ: ಜಾಗೃತಿ ಜಾಥಾ
ಕಳೆದ ಏಳು ವರ್ಷಗಳಿಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿ (As the President of the Block Congress) ಸೇವೆ ಸಲ್ಲಿಸಿದ್ದೇನೆ, ನನ್ನಿಂದಾದಷ್ಟು ಪಕ್ಷದ ಬಲವರ್ಧನೆಗೆ ಶ್ರಮಿಸಿದ್ದೇನೆ, ನನಗೆ ಅರವತ್ತು ವರ್ಷ ಪ್ರಾಯವಾಗಿದೆ, ಇನ್ನೂ ಮುಂದುವರಿಯುವುದು ಸೂಕ್ತವಲ್ಲ, ಹೊಸಬರಿಗೆ, ಪಕ್ಷವನ್ನು ಮತ್ತಷ್ಟು ಗಟ್ಟಿಪಡಿಸುವ ಉತ್ಸಾಹಿಗಳಿಗೆ ಅವಕಾಶ ಸಿಗಲಿ ಎನ್ನುವ ಉದ್ದೇಶದಿಂದ ಜಿಲ್ಲಾಧ್ಯಕ್ಷರು ಹಾಗೂ ಪಕ್ಷದ ಪ್ರಮುಖರಿಗೆ ರಾಜೀನಾಮೆ (Resignation) ಸಲ್ಲಿಸಿದ್ದೇನೆಂದು ಸಿಕ್ವೇರಾ ತಿಳಿಸಿದ್ದಾರೆ.