ಮೂಡುಬಿದಿರೆ: ಕರಾವಳಿ ಪ್ರದೇಶ ಕಾಂಗ್ರೆಸ್ ಸಮಿತಿ (Coastal Region Congress Committee)ಮೂಡುಬಿದಿರೆ ಮೂಲ್ಕಿ ವಿಧಾನಸಭಾ ಕ್ಷೇತ್ರದ ಪ್ರಜಾ ಧ್ವನಿ ಯಾತ್ರೆ (Public Voice Yatra)ಸಭಾ ಕಾರ್ಯಕ್ರಮ ಮೂಡುಬಿದಿರೆ ಸಮಾಜ ಮಂದಿರದಲ್ಲಿ ಜರುಗಿತು.
ವಿಧಾನಪರಿಷತ್ತಿನ ನಾಯಕ ಬಿ ಕೆ ಹರಿಪ್ರಸಾದ್ (BK Hariprasad) ಮಾತನಾಡಿ, ಬಿಜೆಪಿ ಸರಕಾರದ(BJP Govt) ಆಡಳಿತದಿಂದ ಜೀವನ ಮಾಡಲು ಕಂಗೆಟ್ಟ ಜನರಿಗಾಗಿ ಮನೆ ನಿರ್ವಹಿಸಲು ಪ್ರತಿ ಮನೆಗೂ 200ಯೂನಿಟ್ ಉಚಿತ ವಿದ್ಯುತ್(200 units of free electricity), ಮನೆಯೊಡತಿಗೆ 2000ರೂ. ತಿಂಗಳ ಆರ್ಥಿಕ ಸಹಾಯ ನೀಡುವುದಾಗಿ ತಿಳಿಸಿದರು.
ಕಾಂಗ್ರೆಸ್ ಚುನಾವಣಾ(Congress election)ಪ್ರಣಾಳಿಕೆ ತಿಳಿಸಿದರು. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಸರ್ವರಿಗೂ ಯೋಗ್ಯ ಬದುಕು ಕಲ್ಪಿಸಲು ಆಡಳಿತ ನೀಡುವುದಾಗಿ ತಿಳಿಸಿದರು. ಕೇರಳ ಶಾಸಕ ರೋಜಿ ಜಾನ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪರಿಷತ್ ಶಾಸಕರಾದ ಹರೀಶ್ ಕುಮಾರ್, ಮಂಜುನಾಥ ಭಂಡಾರಿ, ಮಾಜಿ ಸಚಿವ ಕೆ ಅಭಯಚಂದ್ರ, ಮಾಜಿ ಶಾಸಕ ಮಧು ಬಂಗಾರಪ್ಪ, ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ (KPCC Secretary Mithun Rai), ಬ್ಲಾಕ್ ಅಧ್ಯಕ್ಷ ವಲೇರಿಯನ್, ಪ್ರಮುಖರಾದ ರಾಜಶೇಖರ ಕೋಟ್ಯಾನ್, ಮಮತಾ ಗಟ್ಟಿ, ಕವಿತಾ ಸನಿಲ್, ಅಪ್ಪಿ, ಭರತ್ ಮುಂಡೋಡಿ, ಚಂದ್ರಹಾಸ್ ಸನಿಲ್, ಸುಪ್ರಿಯಾ ಡಿ ಶೆಟ್ಟಿ, ಜಯ ಕುಮಾರ್ ಶೆಟ್ಟಿ, ಮುಸ್ಲಿಂ ಮುಖಂಡ ಅಬ್ಬಕ್ಕ ವೇದಿಕೆಯಲ್ಲಿದ್ದರು. ಕಾಂಗ್ರೆಸ್ ವಕ್ತಾರ ರಾಜೇಶ್ ಕಡಲಕೆರೆ ಕಾರ್ಯಕ್ರಮ ನಿರೂಪಿಸಿದರು. ಮೂಲ್ಕಿ ಬಪ್ಪನಾಡು ಕ್ಷೇತ್ರದಲ್ಲಿ ಪ್ರಾರಂಭಗೊಂಡ ಪ್ರಜಾಧ್ವನಿ ಯಾತ್ರೆ ಅಳಿಯೂರಿನ ಹೇಮಾ ಸಭಾಭವನದಲ್ಲೂ ಜರುಗಿತು.