ಮೂಡುಬಿದಿರೆ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (Social Democratic Party of India) ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ (Moodbidire Assembly Constituency) ನೂತನ ಕಚೇರಿಯ ಉದ್ಘಾಟನೆ ಹಾಗೂ ಸಾರ್ವಜನಿಕ ಸಭೆಯು ಫೆ.19 ರಂದು ಸಾಯಂಕಾಲ ನಡೆಯಲಿದೆ ಎಂದು ಪಕ್ಷದ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಆಸಿಫ್ ಕೋಟೆಬಾಗಿಲು (Assembly Constituency President Asif Kotebagilu) ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
19ರಂದು ಸಾಯಂಕಾಲ 3.30ಕ್ಕೆ ಮೂಡುಬಿದಿರೆ ಮಸೀದಿ ಪಕ್ಕದ ಭಾರತ್‌ಮಾಲ್‌ನಲ್ಲಿ (Bharatmal) ಪಕ್ಷದ ಕಚೇರಿ ಉದ್ಘಾಟನೆ ಹಾಗೂ 4.30 ಕ್ಕೆ ನಿಶ್ಮಿತಾ ಟವರ್ (Nishmita Tower) ಮುಂಭಾಗದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಸಭೆಯಲ್ಲಿ ಎಸ್‌ಡಿಪಿಐ ಅಭ್ಯರ್ಥಿ (SDPI candidate) ಅಲ್ಫೋನ್ಸ್ ಫ್ರಾಂಕೋ, ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್.ಭಾಸ್ಕರ ಪ್ರಸಾದ್, ರಾಜ್ಯ ಕಾರ್ಯದರ್ಶಿಗಳಾದ ಆನಂದ ಮಿತ್ತಬೈಲ್, ಅಶ್ರಫ್ ಮಾಚಾರ್, ರಾಜ್ಯ ಸಮಿತಿ ಸದಸ್ಯ ಅಥಾವುಲ್ಲಾ ಜೋಕಟ್ಟೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು, ಉಪಾಧ್ಯಕ್ಷ ವಿಕ್ಟರ್ ಮಾರ್ಟಿನ್, ಸಂಘಟನಾ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಹಾಗೂ ಇನ್ನಿತರ ಪ್ರಮುಖರು ಭಾಗವಹಿಸಲಿದ್ದಾರೆಂದು ಎಂದು ಮಾಹಿತಿ ನೀಡಿದರು.
ಇದನ್ನ ಓದಿ: ಪಿಡಿಒ, ಗ್ರಾಮಲೆಕ್ಕಿಗರ ಕೊರತೆ: ತತ್‌ಕ್ಷಣ ಭರ್ತಿಗೆ ಉಮಾನಾಥ ಕೋಟ್ಯಾನ್ ಆಗ್ರಹ
ಎಸ್‌ಡಿಪಿಐ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿ ನಿಸಾರ್ ಮರವೂರು, ಪುತ್ತಿಗೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ತಾಹಿರಾ ಹಂಡೇಲು, ಮಾಧ್ಯಮ ಉಸ್ತುವಾರಿ ಇಮ್ರಾನ್ ಬಜ್ಪೆ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.