ಮೂಡುಬಿದಿರೆ: ವಿಧಾನಸಭಾ ಕ್ಷೇತ್ರದಲ್ಲಿ ಸತತ ಎರಡನೇ ಬಾರಿಗೆ ವಿಜಯ ಸಾಧಿಸಿ ಶಾಸಕರಾಗಿರುವ ಉಮಾನಾಥ ಎ. ಕೋಟ್ಯಾನ್ ಅವರ ವಿಜಯೋತ್ಸವ ಮೆರವಣಿಗೆಯು (Victory procession) ಶನಿವಾರ ನಡೆಯಿತು.
ಮೂಡುಬಿದಿರೆ ಸ್ವರಾಜ್ಯ ಮೈದಾನದಿಂದ ಆರಂಭಗೊಂಡು ಅಲಂಗಾರು, ಬೆಳುವಾಯಿ, ಅಳಿಯೂರು, ಶಿರ್ತಾಡಿ, ಮೂಡುಬಿದಿರೆ, ಸಂಪಿಗೆ ನಿಡ್ಡೋಡಿ ಮೂಲಕ ಕಟೀಲಿಗೆ(Kateel) ಸಾಗಿತು.
ಇದನ್ನ ಓದಿ: ಕಂಬಳಕ್ಕೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ಜಿಲ್ಲಾ ಕಂಬಳ ಸಮಿತಿ ಹರ್ಷ
ಬಿಜೆಪಿ ಮುಖಂಡರಾದ ರಮಾನಾಥ ಅತ್ತಾರ್, ಎಂ.ಎಸ್.ಕೋಟ್ಯಾನ್, ಎಂ.ಬಾಹುಬಲಿ ಪ್ರಸಾದ್, ಭುವನಾಭಿರಾಮ ಉಡುಪ (Bhuvanabhirama Udupa), ಮೇಘನಾಥ ಶೆಟ್ಟಿ, ಈಶ್ವರ ಕಟೀಲು, ಕಸ್ತೂರಿ ಪಂಜ, ಲಕ್ಷ್ಮಣ್ ಪೂಜಾರಿ, ಗೋಪಾಲ ಶೆಟ್ಟಿಗಾರ್, ಕೇಶವ ಕರ್ಕೇರಾ, ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಉಪಾಧ್ಯಕ್ಷೆ ಸುಜಾತ ಶಶಿಧರ್, ಪುರಸಭಾ ಸದಸ್ಯರಾದ ರಾಜೇಶ್ ನಾಯ್ಕ್, ಸೌಮ್ಯ ಶೆಟ್ಟಿ, ದಿವ್ಯಾ ಜಗದೀಶ್, ಶ್ವೇತಾ ಪ್ರವೀಣ್, ನಾಮ ನಿರ್ದೇಶಿತ ಸದಸ್ಯರಾದ ಗಿರೀಶ್ ಕುಮಾರ್, ರಾಘವ ಹೆಗ್ಡೆ ಉದ್ಯಮಿ ರಂಜಿತ್ ಪೂಜಾರಿ, ಹಿಂದೂ ಜಾಗರಣ ವೇದಿಕೆ (Hindu Vigilance Forum) ಸಮಿತ್ ರಾಜ್ ದರೆಗುಡ್ಡೆ, ಕಾರ್ಯಕರ್ತರು ಪಾಲ್ಗೊಂಡರು.