ಮೂಡುಬಿದಿರೆ: ತಾಲೂಕಿನ ದರೆಗುಡ್ಡೆಯ ಇಟಲ ಶ್ರೀ ಸೋಮನಾಥೇಶ್ವರ ದೇವಸ್ಥಾನದ(Somanatheshwar temple)ಬಲ ಬದಿಯಲ್ಲಿರುವ, ಸ್ಥಳೀಯರು ಆನೆಕಲ್ಲು(elephant stone) ಎಂದು ಕರೆಯುವ ಬಂಡೆಯಲ್ಲಿ ತುಳು ಶಾಸನವೊಂದನ್ನು(Tulu inscription) ಉಡುಪಿಯ ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರದ (Oriental Accumulation Research Centre)ಅಧ್ಯಯನ ನಿರ್ದೇಶಕರಾದ ಪ್ರೊ. ಎಸ್.ಎ. ಕೃಷ್ಣಯ್ಯ (Prof. S.A. Krishnaiah)ಅವರು ಪತ್ತೆ ಮಾಡಿರುತ್ತಾರೆ.
ಈ ಸ್ಥಳದ ಅಧ್ಯಯನ ನಡೆಸಲು ಉಡುಪಿಯ ವೇದಮೂರ್ತಿ ಸಗ್ರಿ ಗೋಪಾಲಕೃಷ್ಣ ಸಾಮಗ(Vedamurthy Sagri Gopalakrishna Samaga) ಅವರು ಮಾರ್ಗದರ್ಶನ ನೀಡಿರುವರು ಎಂದು ಅವರು ತಿಳಿಸಿರುತ್ತಾರೆ. ದೇವಾಲಯದ ಜೀರ್ಣೋದ್ಧಾರದ ಹಿನ್ನಲೆಯಲ್ಲಿ ಈ ಬಂಡೆಯ ಸುತ್ತಲೂ ಮಣ್ಣು ಜಮಾವಣೆಯಾಗಿದ್ದು, ಪ್ರಸ್ತುತ ಈ ಶಾಸನದಲ್ಲಿ 5ರಿಂದ 6 ಸಾಲಿನ ಅಸ್ಪಷ್ಟ ತುಳು ಲಿಪಿಯು ಗೋಚರವಾಗಿದ್ದು ಉಳಿದ ಸಾಲುಗಳು ಮಣ್ಣಿನಲ್ಲಿ ಹೂತುಹೋಗಿದೆ.
ಈ ಶಾಸನದ ಹೆಚ್ಚುವರಿ ಅಧ್ಯಯನವನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದು ಕೃಷ್ಣಯ್ಯ ಅವರು ತಿಳಿಸಿದ್ದಾರೆ. ಶಾಸನದ ಪ್ರಾಥಮಿಕ ಅಧ್ಯಯನವನ್ನು ಮಾಡಿರುವ ತುಳುಲಿಪಿ ಶಾಸ್ತ್ರಜ್ಞರಾದ ಡಾ. ರಾಧಾಕೃಷ್ಣ ಬೆಳ್ಳೂರು ಅವರು ಲಿಪಿಯ ಆಧಾರದ ಮೇಲೆ ಈ ಶಾಸನವು 12-13ನೇ ಶತಮಾನಕ್ಕೆ ಸೇರಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕ್ಷೇತ್ರಕಾರ್ಯ ಶೋಧನೆಗೆ ರವಿ ಸಂತೋಷ್ ಆಳ್ವ ಮತ್ತು ಸ್ಥಳೀಯರು ಸಹಕಾರ ನೀಡಿರುತ್ತಾರೆ.