ಮೂಡುಬಿದಿರೆ: ಶಿರ್ತಾಡಿ ಕಂದಿರು ಶ್ರೀ ಆದಿಶಕ್ತಿ ದುರ್ಗಾಂಬಿಕಾ ದೇವಸ್ಥಾನದ (Shirthadi Kandiru shree adhishakthi durgambika temple)ವಾರ್ಷಿಕ ಪೂಜಾ ಮಹೋತ್ಸವ ಹಾಗೂ ದೇವಳದ ಮುಂಭಾಗದಲ್ಲಿ ನೂತನವಾಗಿ ನಿರ್ಮಿಸಿದ ಶಾಶ್ವತ ಚಪ್ಪರ ಉದ್ಘಾಟನೆ ಸಮಾರಂಭ ನಡೆಯಿತು.
ಶಿರ್ತಾಡಿ ಅರ್ಜುನಾಪುರ ಶ್ರೀಮಹಾಲಿಂಗೇಶ್ವರ ದೇವಸ್ಥಾನದ (Mahalingeshwara Temple)ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೋಂಕೆ ನಾರಾಯಣ ಶೆಟ್ಟಿ ಶಾಶ್ವತ ಚಪ್ಪರವನ್ನು ಉದ್ಘಾಟಿಸಿದರು. ತಾಪಂ ಮಾಜಿ ಸದಸ್ಯ ರುಕ್ಕಯ್ಯ ಪೂಜಾರಿ ಅಧ್ಯಕ್ಷತೆವಹಿಸಿದರು. ಸಂತೋಷ್ ರಾಮ್‌ಕುಮಾರ್ ದೊಂಡರಗಡಿಯವರು ರಚಿಸಿ, ಹಾಡಿದ ಶ್ರೀಕ್ಷೇತ್ರದ ಭಕ್ತಿಗೀತೆಯನ್ನು ಲೋಕಾರ್ಪಣೆಗೊಳಿಸಲಾಯಿತು.
ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್(Abhayachandra Jain), ಉದ್ಯಮಿ ಭಾಸ್ಕರ ಕೋಟ್ಯಾನ್, ಮೂಡುಬಿದಿರೆ ಗುರುನಾರಾಯಣ ಸಂಘದ ಅಧ್ಯಕ್ಷ ಸುರೇಶ್ ಪೂಜಾರಿ, ಬಿಜೆಪಿ ದ.ಕ ಜಿಲ್ಲಾಧ್ಯಕ್ಷ ಸುದರ್ಶನ್ ಎಂ., ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಕಲ್ಲಬೆಟ್ಟು ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಪ್ರವೀಣ್ ಕುಮಾರ್ ಜೈನ್, ಪಂಚಶಕ್ತಿ ವಿವಿಧೋದ್ದೇಶ ಸಹಕಾರಿಯ ಅಧ್ಯಕ್ಷ ರಂಜಿತ್ ಪೂಜಾರಿ, ಶಿರ್ತಾಡಿ ಬ್ರಹ್ಮಶ್ರೀ ನಾರಾಯಣಗುರು ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಮಾಟ್ರಾಡಿ, ಮಹಿಳಾ ಘಟಕದ ಅಧ್ಯಕ್ಷೆ ರೇಖಾ ಶಶಿಧರ್, ಕೋಟಿ ಚೆನ್ನಯ ಯುವಶಕ್ತಿ ಅಳಿಯೂರು ಅಧ್ಯಕ್ಷ ಉದಯ ಕೋಟ್ಯಾನ್, ಮಹಿಳಾ ಘಟಕದ ಅಧ್ಯಕ್ಷೆ ಸುಪ್ರಿಯಾ ಶುಭಕರ್, ಸುಶಾಂತ್ ಕರ್ಕೇರ ಮಾರೂರು, ನಿಡ್ಡೋಡಿ ನಾರಾಯಣಗುರು ಪ್ರಸಾದಿತ ಸಂಘದ ಮಾಜಿ ಅಧ್ಯಕ್ಷ ಜಯ ಪೂಜಾರಿ, ನಿವೃತ್ತ ಅರಣ್ಯಾಧಿಕಾರಿ ಮುರಳೀಧರನ್ ಉಪಸ್ಥಿತರಿದ್ದರು.
ದೇವಳದ ಆನುವಂಶೀಕ ಆಡಳಿತ ಮೊಕ್ತೇಸರ ಸೋಮನಾಥ ಶಾಂತಿ ಪ್ರಸ್ತಾವನೆಗೈದರು. ಉತ್ಸವ ಸಮಿತಿಯ ಅಧ್ಯಕ್ಷ ಶಶಿಕುಮಾರ್, ಸುನೀಲ್ ಭುಲಾಯಿ ಸ್ವಾಗತಿಸಿದರು. ಸ್ವಾಗತ ಸಮಿತಿಯ ಅಧ್ಯಕ್ಷ ರಾಘ ಪೂಜಾರಿ ಕೊಪ್ಪದೊಟ್ಟು ಅತಿಥಿಗಳನ್ನು ಗೌರವಿಸಿದರು. ಸುಶ್ಮಿತಾ ಕಂದಿರು ಕಾರ್ಯಕ್ರಮ ನಿರೂಪಿಸಿದರು. ವಿಶ್ವನಾಥ ಕೋಟ್ಯಾನ್ ವಂದಿಸಿದರು.