ಮೂಡುಬಿದಿರೆ: ಹೌದು! ಕರಾವಳಿ ಕುವರ “ಕೋಸ್ಟಲ್” ವುಡುನ (coastal wood) ಪ್ರತಿಭಾವಂತ (talented) ನಾಯಕ ನಟ ರಾಕ್ ಸ್ಟಾರ್ (Rockstar) ರೂಪೇಶ್ ಶೆಟ್ಟಿ ಬಿಗ್ ಬಾಸ್ (bigg Boss)ನ ಟ್ರೋಫಿ ಮುಡಿಗೇರಿಸಿಕೊಂಡಿದ್ದಾರೆ. ಕರಾವಳಿಯ ಮನೆ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.
ಬಿಗ್ ಬಾಸ್ ಸೀಸನ್ 9 (season 9) ಆರಂಭದಿಂದಲೆ ಉತ್ತಮ ಪ್ರದರ್ಶನ ನೀಡಿದ್ದ ರಾಕ್ ಸ್ಟಾರ್ ತುಳುನಾಡು ಮಾತ್ರವಲ್ಲದೆ ರಾಜ್ಯದೆಲ್ಲೆಡೆ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಅಡೆ ತಡೆಗಳನ್ನು ದಾಟಿ ಎಲ್ಲರ ಮನ ಗೆದ್ದಿದ್ದ ರೂಪೇಶ್(Rupesh Shetty) ಇದೀಗ ಬಿಗ್ ಬಾಸ್ ಮನೆಯ ವಿನ್ನರ್ (winner) ಪಟ್ಟವನ್ನು ಹೊತ್ತು ಕರಾವಳಿಗೆ ಹಿಂತಿರುಗಲಿದ್ದಾರೆ.