ಮೂಡುಬಿದಿರೆ: ಇಲ್ಲಿನ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದಲ್ಲಿ ಐದು ದಿನಗಳ ಕಾಲ ವರ್ಷಾವಧಿ ಮಹೋತ್ಸವದ ದೇವರ ಅವಭೃತೋತ್ಸವು (Avabhritotsava of God) ನಡೆಯಿತು. ನೂರಾರು ಭಕ್ತರು ಓಕುಳಿ ಸಂಭ್ರಮದಲ್ಲಿ ಮಿಂದೆದ್ದರು.
ಮಂಗಳವಾರ ಲಾಲಕಿ ಪಲ್ಲಕ್ಕಿ ಉತ್ಸವ (Lalaki Palankki Festival) , ಪೇಟೆ ಸವಾರಿ ನಡೆದಿದ್ದು ಬುಧವಾರ ಬೆಳಿಗ್ಗೆ ಕವಾಟೋದ್ಘಾಟನೆ (Inauguration) ತುಲಾಭಾರ (Thulabhara), ಅಷ್ಟಾವಧಾನ ಸೇವೆ, ಬಳಿಕ ದೇವರ ಅವಭೃತ ಮೆರವಣಿಗೆಯು ಹೊರಟು ಜೈನ್‌ಪೇಟೆ ಕಲ್ಸಂಕ (Jaincity Kalsanka), ಹಳೆಪೊಲೀಸ್ ಠಾಣಿಯ ಮೂಲಕ ಸಾಗಿ ವೆಂಕಟರಮಣ ದೇವಸ್ಥಾನದ (Venkataramana Temple) ಪುಷ್ಕರಣಿಯಲ್ಲಿ ಅವಭೃತ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ಕಾಳಿಕಾಂಬಾ ಮಹಿಳಾ ಸಮಿತಿಯಿಂದ ಸಾಂಸ್ಕೃತಿಕ ವೈವಿಧ್ಯ (Cultural diversity), ಸತೀಶ್ ಆಚಾರ್ಯ ಸುರುಳಿ ಮತ್ತು ಬಳಗದವರಿಂದ ಉದಯರಾಗ, ಸ್ಯಾಕ್ಸೋಫೋನ್‌ವಾದನ (saxophonist) , ಕಾಳಿಕಾಂಬಾ ಸೇವಾ ಸಮಿತಿಯ ವತಿಯಿಂದ ಪುತ್ತೂರು ಜಗದೀಶ ಆಚಾರ್ಯ (Puttur Jagadisha Acharya) ಮತ್ತು ಬಳಗದಿಂದ ಸಂಗೀತ ಗಾನ ಸಂಭ್ರಮ, ಕಾಳಿಕಾಂಬಾ ಭಜನಾ ಮಂಡಳಿಯಿಂದ (Kalikamba Bhajan Council) ಭಜನಾ ಸಂಕೀರ್ತನೆ, ಕಾಳಿಕಾಂಬಾ ಯಕ್ಷಗಾನ ಕಲಾ ಸಂಘದಿಂದ ಯಕ್ಷಗಾನ ಬಯಲಾಟ (Yakshagana Bayalata) ಹಾಗೂ ಸರಪಾಡಿ ಗಾನಸುಧಾ ಬಳಗದಿಂದ ಭಕ್ತಿ ಭಾವ ಜಾನಪದ ಗಾನಲಹರಿ ನಡೆಯಿತು. ಕ್ಷೇತ್ರದ ತಂತ್ರಿ ಎಸ್ ಕೇಶವ ಆಚಾರ್ಯ, ಆಡಳಿತ ಮೊಕ್ತೇಸರ ಜಯಕರ ಆಚಾರ್ಯ, ಮೊಕ್ತೇಸರರಾದ ಬಾಲಕೃಷ್ಣ ಆಚಾರ್ಯ ಉಳಿಯ, ಶಿವರಾಮ ಆಚಾರ್ಯ ಉಳಿಯ (Shivaram Acharya Uliya), ಕಾಳಿಕಾಂಬಾ ಸೇವಾ ಸಮಿತಿಯ ಅಧ್ಯಕ್ಷ ಹರಿಶ್ಚಂದ್ರ ಆಚಾರ್ಯ, ಕಾಳಿಕಾಂಬಾ ಮಹಿಳಾ ಸಮಿತಿಯ ಅಧ್ಯಕ್ಷೆ ಸುಜಾತ ಬಾಲಕೃಷ್ಣ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ಇದನ್ನ ಓದಿ: ಅಂಕಸಾಲೆ ದೇವಾಲಯ ಮಾರ್ಗಸೂಚಿ ಧ್ವಂಸ
ಶಾಸಕ ಉಮಾನಾಥ ಕೋಟ್ಯಾನ್ (MLA Umanatha Kotyan), ಮಾಜಿ ಸಚಿವ ಅಭಯಚಂದ್ರ ಜೈನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ ಮತ್ತಿತರರು ಗಣ್ಯರು ಭಾಗವಹಿಸಿದರು.